ADVERTISEMENT

ನವಾಜ್ ಪತ್ನಿ ನಾಮಪತ್ರಕ್ಕೆ ವಿರೋಧ

ಪಿಟಿಐ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಕುಲ್ಸುಮ್ ನವಾಜ್
ಕುಲ್ಸುಮ್ ನವಾಜ್   

ಲಾಹೋರ್: ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್ ಷರೀಫ್ ಅವರ ಪತ್ನಿ ಕುಲ್ಸುಮ್ ನವಾಜ್ ಅವರು ಸಲ್ಲಿಸಿದ ನಾಮಪತ್ರವನ್ನು ಪ್ರಶ್ನಿಸಿ ವಿರೋಧ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಇಲ್ಲಿನ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

ಕುಲ್ಸುಮ್ ಅವರು ಸಲ್ಲಿಸಿದ ನಾಮಪತ್ರ ವಿರೋಧಾಭಾಸದಿಂದ ಕೂಡಿದೆ ಮತ್ತು ನಾಮಪತ್ರ ಸಲ್ಲಿಸಲು ಅವರು ಖುದ್ದಾಗಿ ಹಾಜರಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಕುಲ್ಸುಮ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉದ್ಯೋಗ ಪರವಾನಗಿ ಹೊಂದಿದ್ದಾರೆ. ಇದೇ ಕಾರಣಕ್ಕೆ ನವಾಜ್ ಷರೀಫ್ ಅನರ್ಹರಾಗಿದ್ದಾರೆ’ ಎಂದು ದೂರುದಾರ ಅಂದಾಲೀಬ್ ಅಬ್ಬಾಸಿ ಹೇಳಿದ್ದಾರೆ.

ನವಾಜ್ ಷರೀಫ್ ಅವರಿಂದ ತೆರವಾದ ಕ್ಷೇತ್ರಕ್ಕೆ ಕುಲ್ಸುಮ್ ಅವರನ್ನು ಕಣಕ್ಕಿಳಿಸಲು ಪಾಕಿಸ್ತಾನ ಮುಸ್ಲಿಂ ಲೀಗ್– ನವಾಜ್ ಪಕ್ಷ ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.