ADVERTISEMENT

ನೇಪಾಳ ಮೂಲಕ ಬಿಹಾರಕ್ಕೆ ರೈಲು ಸಂಪರ್ಕ: ಚೀನಾ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಬೀಜಿಂಗ್ (ಪಿಟಿಐ): ಭಾರತ ಮತ್ತು ದಕ್ಷಿಣ ಏಷ್ಯಾ ಜೊತೆಗೆ ತನ್ನ ಸಂಪರ್ಕವನ್ನು ಹೆಚ್ಚಿಸಿಕೊಳ್ಳಲು ಚೀನಾವು ರೈಲು ಸೇವೆಯನ್ನು  ನೇಪಾಳ ಮೂಲಕ ಬಿಹಾರಕ್ಕೆ ವಿಸ್ತರಿಸಲು ಉದ್ದೇಶಿಸಿದೆ ಎಂದು ಚೀನಾದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಟಿಬೆಟ್  ಮೂಲಕ ನೇಪಾಳಕ್ಕೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಈಗಾಗಲೇ ಚೀನಾ ವಿಸ್ತರಿಸಿಕೊಳ್ಳುತ್ತಿದೆ. ನೇಪಾಳದ ರಸುವಗಡಿ ಪ್ರದೇಶಕ್ಕೆ ರೈಲು ಸಂಚಾರ ವ್ಯವಸ್ಥೆಗಾಗಿ ಚೀನಾ ಮತ್ತು ನೇಪಾಳ  ಮಾತುಕತೆಯನ್ನೂ ನಡೆಸಿವೆ.

ಚೀನಾ ರೈಲು ಮಾರ್ಗವು 2020ರ ವೇಳೆಗೆ ನೇಪಾಳ ಗಡಿ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಪತ್ರಿಕೆ ತಿಳಿಸಿದೆ.

ಈ ರೈಲು ಸಂಪರ್ಕವನ್ನು ರಸುವಗಡಿಯಿಂದ ಬಿರ್‌ಗುಂಜ್ ಮೂಲಕ ವಿಸ್ತರಿಸಿದಲ್ಲಿ  ಕೇವಲ 240 ಕಿ.ಮೀ. ದೂರವಿರುವ ಬಿಹಾರವನ್ನು ತಲುಪಬಹುದು.
ಬಿಹಾರಕ್ಕೆ ರೈಲು ಸಂಪರ್ಕ ಹೊಂದಿದರೆ ಈ ಮಾರ್ಗವು  ವೆಚ್ಚ ಮತ್ತು ದೂರವನ್ನು ಉಳಿಸಲಿದೆ. ಕೋಲ್ಕತ್ತ ಮೂಲಕ ಭಾರತ ತಲುಪುವ ಮಾರ್ಗಕ್ಕಿಂತ ಇದು ಅನುಕೂಲಕರ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.