ADVERTISEMENT

ನೈಜೀರಿಯಾ: 24 ಗಂಟೆಗಳಲ್ಲಿ ಬಲಿ ಪಡೆವ ನಿಗೂಢ ರೋಗ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 5:40 IST
Last Updated 19 ಏಪ್ರಿಲ್ 2015, 5:40 IST

ಲಾಗೋಸ್(ಎಎಫ್ ಪಿ): ನೈಜೀರಿಯಾದ ಆಗ್ನೇಯ ಭಾಗದಲ್ಲಿನ ಪಟ್ಟಣದಲ್ಲಿ ನಿಗೂಢ ರೋಗವೊಂದು 18 ಮಂದಿಯನ್ನು ಬಲಿಪಡೆದಿದೆ. ಇದು ರೋಗಿಗೆ ತಗುಲಿದ 24 ಗಂಟೆಗಳಲ್ಲಿ ವ್ಯಕ್ತಿ ಮೃತನಾಗುತ್ತಾನೆ ಎಂದು ಇಲ್ಲಿನ ಸರ್ಕಾರ ಹೇಳಿದೆ.

ಓಡ್ ಲಿರಿಲ್ ಪಟ್ಟಣದಲ್ಲಿ ಈ ಬಗೆಯ ನಿಗೂಢ ರೋಗವೊಂದು ದಾಳಿಯಿಟ್ಟಿದ್ದು, ಪ್ರಸ್ತುತ ಒಂದು ವಾರದಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡ 23 ಮಂದಿಯ ಪೈಕಿ 18 ಮಂದಿ ಮೃತಪಟ್ಟಿದ್ದಾರೆ. ತಲೆನೋವು, ತೂಕ ನಷ್ಟ, ಮಂದ ದೃಷ್ಟಿ ಮತ್ತು ಪ್ರಜ್ಞೆ ಕಳೆದುಕೊಳ್ಳುವ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಂಡು, 24 ಗಂಟೆಗಳ ಒಳಗೆ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಶನಿವಾರ ತಿಳಿಸಿದ್ದಾರೆ.

ನಿಗೂಢ ಸಾವಿನ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಎಬೋಲ ಅಥವಾ ಇನ್ನಾವುದೇ ಮಾರಣಾಂತಿಕ ಸೋಂಕಿನ ಬಗ್ಗೆ ಸರ್ಕಾರಿ ಆರೋಗ್ಯ ಅಧಿಕಾರಿಗಳು, ಚಿಕಿತ್ಸಾ ಸಂಸ್ಥೆಗಳ ಸೋಂಕುಶಾಸ್ತ್ರಜ್ಞರು ರೋಗ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.