ADVERTISEMENT

ನ್ಯಾನೊ ಕಣಗಳಿಂದ ಇನ್ಸುಲಿನ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಮೇ 2013, 19:59 IST
Last Updated 5 ಮೇ 2013, 19:59 IST

ವಾಷಿಂಗ್ಟನ್ (ಪಿಟಿಐ): ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಬಿಡುಗಡೆ ಮಾಡಬಲ್ಲ `ನ್ಯಾನೊ ಕಣಗಳ ಜಾಲಬಂಧ'ವನ್ನು  ಅಭಿವೃದ್ಧಿಪಡಿಸಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ನಡೆಸಿದ ಈ ಚಿಕಿತ್ಸೆ ಯಶಸ್ವಿಯಾಗಿದೆ. ಒಮ್ಮೆ ಚರ್ಮದ ಒಳ ಪದರಕ್ಕೆ `ನ್ಯಾನೊ ಕಣಗಳ ಜಾಲಬಂಧ'ವನ್ನು ಚುಚ್ಚುಮದ್ದು ರೂಪದಲ್ಲಿ ಒಳತೂರಿಸಿದರೆ ಒಂದು ವಾರಕ್ಕೂ ಹೆಚ್ಚು ಅವಧಿಯವರೆಗೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧಕ ಡಾ. ಝೆನ್ ಗು ತಿಳಿಸಿದ್ದಾರೆ.

ಮಧುಮೇಹ ಇರುವವರು ಪ್ರಸ್ತುತ ತೆಗೆದುಕೊಳ್ಳುವ ಇನ್ಸುಲಿನ್ ಚುಚ್ಚುಮದ್ದುಗಳು ನೋವುಕಾರಕ. ಆದರೆ ನ್ಯಾನೊ ಕಣಗಳ ಜಾಲಬಂಧವು ಇಂತಹ ನೋವು ಇರುವುದಿಲ್ಲ ಎಂದೂ ಹೇಳಿದ್ದಾರೆ.

ನಾಥ್ ಕೆರೊಲಿನ ಸ್ಟೇಟ್ ಯೂನಿವರ್ಸಿಟಿ, ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು   ಬಾಸ್ಟನ್ ಚಿಲ್ಡ್ರನ್ಸ್ ಹಾಸ್ಟಿಟಲ್ ತಜ್ಞರು ಜತೆ ಸೇರಿ ಈ ಸಂಶೋಧನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.