ADVERTISEMENT

ನ್ಯೂಯಾರ್ಕ್‌ ನ್ಯಾಯಾಧೀಶರಾಗಿ ಭಾರತ ಮೂಲದ ಮಹಿಳೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 8:59 IST
Last Updated 16 ಏಪ್ರಿಲ್ 2015, 8:59 IST

ವಾಷಿಂಗ್ಟನ್‌ (ಐಎಎನ್‌ಎಸ್‌): ಭಾರತ ಮೂಲದ ರಾಜರಾಜೇಶ್ವರಿ ಅವರು ನ್ಯೂಯಾರ್ಕ್‌ ಕ್ರಿಮಿನಲ್‌ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಭಾರತ ಮೂಲದವರೊಬ್ಬರು ನ್ಯೂಯಾರ್ಕ್‌ನ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಇದೇ ಮೊದಲು.

43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು. 16 ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ, ರಿಚ್ಮಂಡ್‌ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

‘ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ. ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು ಸ್ಮರಣೀಯ. ಈ ನೇಮಕ ನನ್ನಂಥ ಅನೇಕರಿಗೆ ಪ್ರೇರಣೆ’ ಎಂದು ರಾಜರಾಜೇಶ್ವರಿ ಹೇಳಿದ್ದಾರೆ.

ADVERTISEMENT

ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.