ADVERTISEMENT

ಪತ್ರಕರ್ತರ ವಿಚಾರಣೆ

ಏಜೆನ್ಸೀಸ್
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST

ಇಸ್ತಾಂಬುಲ್: ಎಂಟು ತಿಂಗಳುಗಳಿಂದ ಬಂಧನದಲ್ಲಿರುವ ಇಲ್ಲಿನ ‘ಕುಮ್‌ಹುರಿಯತ್’ ದಿನ ಪತ್ರಿಕೆಯ 17 ನಿರ್ದೇಶಕರು ಮತ್ತು ಪತ್ರಕರ್ತರು ಸೋಮವಾರ ವಿಚಾರಣೆ ಎದುರಿಸಿದ್ದಾರೆ. ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರ ಆಡಳಿತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಎದುರಾದ ಪರೀಕ್ಷೆ ಎಂದು ಇದನ್ನು ಬಣ್ಣಿಸಲಾಗಿದೆ.

ಅಮೆರಿಕದ ಧರ್ಮಪ್ರಚಾರಕ ಫೆಥುಲ್ಲಾಹ್ ಗುಲೆನ್ ಕ್ಷಿಪ್ರಕ್ರಾಂತಿಗೆ ಯತ್ನಿಸಿದ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದನ್ನು ವಿರೋಧಿಸಿ ಲೇಖನ, ಚಿತ್ರಗಳನ್ನು ಪ್ರಕಟಿಸಿದ ಕಾರಣಕ್ಕೆ ಪತ್ರಕರ್ತರನ್ನು ಬಂಧಿಸಲಾಗಿತ್ತು.

***
ವಲಸಿಗರ ಸಾವು
ಹ್ಯೂಸ್ಟನ್‌:
ಟ್ರ್ಯಾಕ್ಟರ್‌ನ ಟ್ರೇಲರ್‌ನಲ್ಲಿ ಅಕ್ರಮವಾಗಿ ವಲಸೆ ಹೋಗುತ್ತಿದ್ದ ನೂರಾರು ಜನರಲ್ಲಿ 9 ಮಂದಿ ನೀರಿನ ಕೊರತೆ, ತೀವ್ರ ಬಿಸಿಲಿನ ಝಳದಿಂದ ಸಾವಿಗೀಡಾಗಿದ್ದಾರೆ. ಹಲವರ ಮೆದುಳಿಗೆ ತೀವ್ರ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.