ADVERTISEMENT

ಪಾಕಿಸ್ತಾನದಲ್ಲಿ ಮತ್ತೆ 4 ಪೋಲಿಯೊ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 10:36 IST
Last Updated 1 ನವೆಂಬರ್ 2014, 10:36 IST

ಇಸ್ಲಾಮಾಬಾದ್‌(ಪಿಟಿಐ): ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಮತ್ತೆ ನಾಲ್ಕು ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಪೋಲಿಯೊ ಪೀಡಿತ ಪ್ರಕರಣಗಳ ಸಂಖ್ಯೆಯು 235ಕ್ಕೆ ಏರಿಕೆಯಾಗಿದೆ. 

ಈ ಮೂಲಕ ತನ್ನ 14 ವರ್ಷ ಹಿಂದಿನ ದಾಖಲೆಯನ್ನು ಪಾಕಿಸ್ತಾನ ಮೀರಿದೆ. 2000ನೇ ಇಸ್ವಿಯಲ್ಲಿ ಪಾಕಿಸ್ತಾನದಲ್ಲಿ 199 ಪೋಲಿಯೊ ಪ್ರಕರಣಗಳು ವರದಿಯಾಗಿದ್ದವು.

ಅಂಗವಿಕತೆ ಉಂಟುಮಾಡುವ ರೋಗದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಸತತ ಹೋರಾಟ ಫಲ ನೀಡಿದಂತೆ ತೋರುತ್ತಿಲ್ಲ.

ADVERTISEMENT

ಬಲೂಚಿಸ್ತಾನದ ಕ್ವೆಟ್ಟಾ ಹಾಗೂ ಕಿಲ್ಲಾ ಅಬ್ದುಲ್ಲಾದಲ್ಲಿ ಮೂರು ಹಾಗೂ ಅಫ್ಘಾನಿಸ್ತಾನ ಗಡಿ ಭಾಗದಲ್ಲಿರುವ ದಕ್ಷಿಣ ವಜಿರಿಸ್ತಾನದಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಪೋಷಕರ ನಿರ್ಬಂಧದಿಂದಾಗಿ ಮಕ್ಕಳಿಗೆ  ಯಾವತ್ತೂ ಪೋಲಿಯೊ  ತಡೆ ಲಸಿಕೆ ಪಡೆದಿಲ್ಲ.

ಪಾಕಿಸ್ತಾನದ ವಾಯವ್ಯ ಪ್ರದೇಶಗಳು ಪೋಲಿಯೊ ವೈರಸ್‌ ತಾಣ ಎನಿಸಿದ್ದು, ಅಲ್ಲಿಂದ ಇತರ ಪ್ರದೇಶಗಳಿಗೆ ಹರಡುತ್ತಿದೆ.

ಈ ವರೆಗೂ ಬುಡಕಟ್ಟು ಪ್ರದೇಶದಿಂದ 151 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಖೈಬರ್‌ಪಖ್ತುಂಖ್ವಾ ಪ್ರಾಂತ್ಯದಿಂದ 48, ಸಿಂಧ್ ಪ್ರಾಂತ್ಯದಿಂದ 23, ಬಲೂಚಿಸ್ತಾನದಿಂದ 10 ಹಾಗೂ ಪಂಜಾಬ್‌ನಿಂದ ಮೂರು ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.