ADVERTISEMENT

ಪಾಕ್‌ ವಾಯುದಾಳಿ: 92 ಉಗ್ರರ ಸಾವು

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 14:07 IST
Last Updated 28 ಜನವರಿ 2015, 14:07 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌ (ಐಎಎನ್ಎಸ್‌): ಪಾಕಿಸ್ತಾನದ ಉತ್ತರ ವಜಿರಿಸ್ತಾನ್‌ ಮತ್ತು ಖೈಬರ್‌ ಪ್ರಾಂತ್ಯದ ಉಗ್ರರ ಅಡಗುದಾಣಗಳ ಮೇಲೆ ನಡೆದ ವಾಯುದಾಳಿಯಲ್ಲಿ ಕನಿಷ್ಠ 92 ಮಂದಿ ಸಾವನ್ನಪ್ಪಿದ್ದಾರೆ ಎಂದು ಡಾನ್‌ ಪತ್ರಿಕೆ ಬುಧವಾರ ವರದಿ ಮಾಡಿದೆ.

ಉತ್ತರ ವಜಿರಿಸ್ತಾನ್‌ನ  ದತ್ತಖೆಲ್‌ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ವಾಯುದಾಳಿಯಲ್ಲಿ 12 ಮಂದಿ ವಿದೇಶಿಯರು ಸೇರಿದಂತೆ ಸುಮಾರು 53 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಆರು ಅಡಗುದಾಣಗಳು, ಸ್ಫೋಟದಾಳಿಗೆ ಬಳಸುವ ಏಳು ವಾಹನಗಳು ಮತ್ತು ಯುದ್ಧಸಾಮಗ್ರಿಗಳ ತ್ಯಾಜ್ಯ ಘಟಕವನ್ನು ನಾಶಪಡಿಸಲಾಗಿದೆ ಎಂದು ಆಂತರಿಕ ಸೇವೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಕಟಣೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಅದೇ ಪ್ರದೇಶದಲ್ಲಿ ಮತ್ತೊಮ್ಮೆ ನಡೆಸಿದ ದಾಳಿಯಲ್ಲಿ 23 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಖೈಬರ್‌ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ 16 ಶಂಕಿತ ಉಗ್ರರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಥೆರ್ಕೊಖಾಸ್‌, ವಚಾವನಾ, ಸ್ರಾ ವೆಲ್ಲಾ ನಕಾಯ್‌ ಪ್ರದೇಶಗಳಲ್ಲಿ ವಾಯುದಾಳಿ ನಡೆಸಲಾಗಿದೆ. ಸಾವನ್ನಪ್ಪಿದವರು ತೆಹ್ರೀಕ್‌ ತಾಲಿಬಾನ್‌ ಪಾಕಿಸ್ತಾನ್‌ ಮತ್ತು ಲಷ್ಕರ್‌ಇಸ್ಲಾಮ್‌ ಸಂಘಟನೆಗಳಿಗೆ ಸೇರಿದವರೆಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.