ADVERTISEMENT

ಪ್ರವಾಸಿಗರಿಗೆ ಮುಂದಿನ ವರ್ಷದಿಂದ ಚಂದ್ರಯಾನ

ಏಜೆನ್ಸೀಸ್
Published 28 ಫೆಬ್ರುವರಿ 2017, 11:27 IST
Last Updated 28 ಫೆಬ್ರುವರಿ 2017, 11:27 IST
ಪ್ರವಾಸಿಗರಿಗೆ ಮುಂದಿನ ವರ್ಷದಿಂದ ಚಂದ್ರಯಾನ
ಪ್ರವಾಸಿಗರಿಗೆ ಮುಂದಿನ ವರ್ಷದಿಂದ ಚಂದ್ರಯಾನ   

ಕೇಪ್‌ ಕಾನಾವೆರಲ್‌: ಚಂದ್ರನ ಸುತ್ತಲೂ ಸುತ್ತಬೇಕು, ಬಾಹ್ಯಾಕಾಶ ಯಾನ ಮಾಡಬೇಕೆಂಬ ಆಸೆ ನಿಮ್ಮದಾ? ಹಾಗಿದ್ದರೆ ಮುಂದಿನ ವರ್ಷದಲ್ಲೆ ಪ್ರಯಾಣಕ್ಕೆ ಸಿದ್ಧರಾಗಿ...

ಹೌದು, ಅಮೆರಿಕದ ಸ್ಪೇಸ್‌ ಎಕ್ಸ್‌ (ಸ್ಪೇಸ್‌ ಎಕ್ಸ್‌ಪ್ಲೋರೇಶನ್‌ ಟೆಕ್ನಾಲಜಿಸ್‌ ಕಾರ್ಪೊರೇಶನ್‌) ಕಂಪೆನಿಯು ಇಬ್ಬರು ಆಕಾಶಯಾನ ನಡೆಸಬಹುದಾದ ಡ್ರ್ಯಾಗನ್‌–2 ಎಂಬ ಹೆಸರಿನ ಗಗನನೌಕೆ ಸಿದ್ಧಪಡಿಸಿದೆ.

ಪ್ರವಾಸಿಗರಿಗಾಗಿ ಈ ವಿಶೇಷ ವಾಹನವನ್ನು ತಯಾರಿಸಲಾಗಿದೆ. ಈ ಯೋಜನೆಗೆ ನಾಸಾ ಸಹಭಾಗಿತ್ವ ನೀಡಿದೆ. ಇದರ ಕುರಿತು ಸ್ಪೇಸ್‌ ಎಕ್ಸ್‌ನ ಪ್ರಧಾನ ಕಾರ್ಯದರ್ಶಿ ಎಲೊನ್‌ ಮಸ್ಕ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.