ADVERTISEMENT

ಪ್ರವಾಸಿಗರೆ ಜಾಗ್ರತೆ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ವಾಷಿಂಗ್ಟನ್ (ಪಿಟಿಐ): ಪ್ರವಾಸ ಹೊರಟವರು ಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ಮತ್ತು ಸಾರ್ವಜನಿಕ ಸಾರಿಗೆಗಳನ್ನು ಬಳಸುವಾಗ ಜಾಗ್ರತೆ ವಹಿಸುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಕಿವಿಮಾತು ಹೇಳಿದೆ.

ಪ್ಯಾರಿಸ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಮಾಲಿಯಲ್ಲಿನ ಉಗ್ರರ ದಾಳಿಯ ಬೆನ್ನಲ್ಲೇ ಅಮೆರಿಕ ತನ್ನ ಪ್ರಜೆಗಳಿಗೆ ಈ ರೀತಿ ಸಲಹೆ ನೀಡಿದೆ.

‘ಇಸ್ಲಾಮಿಕ್ ಸ್ಟೇಟ್‌  ಅಲ್–ಕೈದಾ, ಬೊಕೊ ಹರಮ್ ಮತ್ತಿತರ ಉಗ್ರರ ಸಂಘಟನೆಗಳು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಬಂದಿದೆ’ ಎಂದು ಸೋಮವಾರ ಬಿಡುಗಡೆ
ಯಾಗಿರುವ ಅಮೆರಿಕದ ‘ಟ್ರಾವೆಲ್ ಅಡ್ವೈಸರಿ’ಯಲ್ಲಿ ಹೇಳಲಾಗಿದೆ.

ಸಿರಿಯಾ ಮತ್ತು ಇರಾಕ್‌ನಿಂದ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿರುವ ಐ.ಎಸ್. ಉಗ್ರರು ದಾಳಿ ನಡೆಸಬಹುದು. ಉಗ್ರರ ದಾಳಿಗಳು ಯಾವುದೇ ಸ್ವರೂಪದ್ದಾಗಿರಬಹುದು. ಉಗ್ರರು ರಾಜತಾಂತ್ರಿಕರನ್ನು ಮತ್ತು ಸಾರ್ವಜನಿಕರನ್ನೂ ಗುರಿಯಾಗಿರಿಸಿಕೊಳ್ಳಬಹುದು ಎಂದು ಅಮೆರಿಕ ಅನುಮಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT