ADVERTISEMENT

ಪ್ರಸವ ವೇದನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ಮತ್ತೊಬ್ಬಾಕೆಯ ಹೆರಿಗೆ ಮಾಡಿಸಿದ ವೈದ್ಯೆ

ಏಜೆನ್ಸೀಸ್
Published 2 ಆಗಸ್ಟ್ 2017, 11:28 IST
Last Updated 2 ಆಗಸ್ಟ್ 2017, 11:28 IST
ನವಜಾತ ಶಿಶುವಿನೊಂದಿಗೆ ಡಾ. ಅಮಂಡಾ ಹೆಸ್
ನವಜಾತ ಶಿಶುವಿನೊಂದಿಗೆ ಡಾ. ಅಮಂಡಾ ಹೆಸ್   

ನವದೆಹಲಿ: ವೃತ್ತಿಯಲ್ಲಿ ವೈದ್ಯೆಯಾಗಿರುವ ಆಕೆ ತುಂಬು ಗರ್ಭಿಣಿ. ಪ್ರಸವ ವೇದನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ವೇಳೆ, ಸಮೀಪದ ಇನ್ನೊಂದು ಕೊಠಡಿಯಿಂದ ಹೆರಿಗೆ ನೋವಿನಿಂದ ಕೂಗುತ್ತಿರುವ ಸದ್ದು ಕೇಳಿ ಬಂದಿತು. ಆದರೆ, ಅಲ್ಲಿ ವೈದ್ಯರಿರಲಿಲ್ಲ. ವೈದ್ಯರು ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ತಡಮಾಡದ ವೈದ್ಯೆ ತಮ್ಮ ಪ್ರಸವದ ಸಮಯ ಸಮೀಪಿಸಿದ್ದರೂ ಧೈರ್ಯಗುಂದದೆ ಪಕ್ಕದ ಕೊಠಡಿಗೆ ತೆರಳಿ ಆಸ್ಪತ್ರೆಯ ಸಿಬ್ಬಂದಿ ಸಹಾಯದಿಂದ ಹೆರಿಗೆ ಮಾಡಿಸಿ ವೃತ್ತಿನಿಷ್ಠೆ ಮೆರೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಮೆರಿಕದ ಕ್ಯಾಂಟಕಿ ಪ್ರಾಂತ್ಯದ ಫ್ರಾಂಕ್‌ಫೋರ್ಟ್‌ನ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಡಾ. ಅಮಂಡಾ ಹೆಸ್ ಎಂಬುವವರೇ ವೃತ್ತಿನಿಷ್ಠೆ ಮೆರೆದು ಗಮನಸೆಳೆದವರು. ಲೀಲಾ ಹ್ಯಾಲಿಡೇ ಜಾನ್‌ಸನ್ ಎಂಬ ಮಹಿಳೆಗೆ ಅವರು ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಶಿಶು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದಾದ ಮರುದಿನ ಡಾ. ಅಮಂಡಾ ಹೆಸ್ ಕೂಡ ಮುದ್ದಾದ ಮುಗುವಿಗೆ ಜನ್ಮ ನೀಡಿದ್ದಾರೆ. ಹೆಸ್‌ ವೃತ್ತಿಪರತೆಗೆ ಆಸ್ಪತ್ರೆ ಸಿಬ್ಬಂದಿ, ವೈದ್ಯರು, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.