ADVERTISEMENT

ಬಾಲಕಿ ಪತ್ತೆಗಾಗಿ ಅಮೆರಿಕನ್ನರ ಪ್ರಾರ್ಥನೆ

ಪಿಟಿಐ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
ಬಾಲಕಿ ಪತ್ತೆಗಾಗಿ ಅಮೆರಿಕನ್ನರ ಪ್ರಾರ್ಥನೆ
ಬಾಲಕಿ ಪತ್ತೆಗಾಗಿ ಅಮೆರಿಕನ್ನರ ಪ್ರಾರ್ಥನೆ   

ಹ್ಯೂಸ್ಟನ್‌, ಅಮೆರಿಕ: ಎರಡು ವಾರಗಳ ಹಿಂದೆ ಟೆಕ್ಸಾಸ್‌ನ ರಿಚರ್ಡ್‌ಸನ್‌ ನಗರದ ಮನೆಯೊಂದರಿಂದ ನಿಗೂಢವಾಗಿ ಕಣ್ಮರೆಯಾದ ಭಾರತ ಸಂಜಾತ ಬಾಲಕಿ ಶೆರಿನ್‌ ಮ್ಯಾಥ್ಯೂಸ್‌ ಸುರಕ್ಷಿತವಾಗಿ ಮರಳಲಿ ಎಂದು ಸಾವಿರಾರು ಅಮೆರಿಕನ್ನರು ಶನಿವಾರ ಪ್ರಾರ್ಥನೆ ನಡೆಸಿದರು.

‘ಶೆರಿನ್‌ ಪೋಷಕರು ಸತ್ಯ ಹೇಳುವಂತೆ’ ಹಲವರು ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ಪೋಷಕರು ಸಹಕರಿಸುತ್ತಿಲ್ಲ ಎಂದು ಪೋಲಿಸರು ಹೇಳಿದ್ದಾರೆ.

ಬಿಹಾರದ ನಳಂದಾದಲ್ಲಿನ ಎನ್‌ಜಿಒ ಒಂದರಿಂದ ಕಳೆದ ವರ್ಷ ಶೆರಿನ್‌ಳನ್ನು ವೆಸ್ಲೆ ಮ್ಯಾಥ್ಯೂಸ್‌ ದತ್ತು ಪಡೆದಿದ್ದರು. ಅಕ್ಟೋಬರ್‌ 7ರಂದು   ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಮ್ಯೂಥ್ಯೂಸ್‌ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಮನೆಯಿಂದ ಹೊರ ನಿಲ್ಲುವ ಶಿಕ್ಷೆ ನೀಡಿದ್ದರು.

ADVERTISEMENT

ಅವರು ಸ್ವಲ್ಪ ಹೊತ್ತಿನ ನಂತರ ಬಂದು ನೋಡಿದಾಗ ಶೆರಿನ್‌ ನಾಪತ್ತೆಯಾಗಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.