ADVERTISEMENT

ಬ್ಯಾಟರಿರಹಿತ ಮೊಬೈಲ್‌ ಅಭಿವೃದ್ಧಿ

ಪಿಟಿಐ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಬ್ಯಾಟರಿರಹಿತ ಮೊಬೈಲ್‌ ಅಭಿವೃದ್ಧಿ
ಬ್ಯಾಟರಿರಹಿತ ಮೊಬೈಲ್‌ ಅಭಿವೃದ್ಧಿ   

ವಾಷಿಂಗ್ಟನ್‌: ಬ್ಯಾಟರಿ ಇಲ್ಲದೇ ಕೆಲಸ ಮಾಡುವ ಜಗತ್ತಿನ ಮೊದಲ ಮೊಬೈಲ್‌ ಫೋನ್‌ ಅನ್ನು ವಿಜ್ಞಾನಿಗಳ ತಂಡ ಆವಿಷ್ಕರಿಸಿದೆ. ಈ ತಂಡದಲ್ಲಿ ಭಾರತೀಯ ಮೂಲದ ಸಂಶೋಧಕರೂ ಇದ್ದಾರೆ.

ಈ ಮೊಬೈಲ್‌ ರೇಡಿಯೊ ಅಥವಾ ಬೆಳಕಿನ ತರಂಗಾಂತರಗಳ ಶಕ್ತಿಯನ್ನು ಹೀರಿಕೊಂಡು ಈ ಫೋನ್‌ ಕಾರ್ಯ ನಿರ್ವಹಿಸುತ್ತದೆ ಎಂದು ತಂಡ ಹೇಳಿದೆ.

‘ಕಾರ್ಯ ನಿರ್ವಹಣೆಗಾಗಿ ವಿದ್ಯುತ್‌ ಶಕ್ತಿಯ ಸಹಾಯವಿಲ್ಲದೇ ಅಭಿವೃದ್ಧಿಪಡಿಸಿದ ಮೊದಲ ಮೊಬೈಲ್‌ ಫೋನ್‌ ಇದಾಗಿದೆ’ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ಯಾಮ್‌ ಗೊಲ್ಲಕೋಟಾ ಹೇಳಿದ್ದಾರೆ.

ಈಗ ಬಳಕೆಯಲ್ಲಿರುವ ಬ್ಯಾಟರಿ ಸಹಿತ ಮೊಬೈಲ್‌ಗಳಲ್ಲಿ ಧ್ವನಿ ವಾಹಕಗಳನ್ನು  ಡಿಜಿಟಲ್‌ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಅದಕ್ಕಾಗಿ ಅತ್ಯಧಿಕ ವಿದ್ಯುತ್‌ ಶಕ್ತಿ ಬೇಕಾಗುತ್ತದೆ.
ಬ್ಯಾಟರಿ ಇಲ್ಲದೇ ಅಭಿವೃದ್ಧಿಪಡಿಸಿದ ಹೊಸ  ಮಾದರಿಯಲ್ಲಿ,  ವ್ಯಕ್ತಿ ಮಾತನಾಡುವಾಗ ಅಥವಾ ಕೇಳಿಸಿಕೊಳ್ಳುವಾಗ ಮೈಕ್ರೊಫೋನ್‌ ಅಥವಾ ಸ್ಪೀಕರ್‌ಗಳಲ್ಲಿ ಉಂಟಾಗುವ ಕಂಪನಗಳ ಶಕ್ತಿಯನ್ನೇ ಬಳಸಿಕೊಂಡು ಧ್ವನಿಸಂದೇಶಗಳು ಪ್ರಸಾರವಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ.

‌ಈ ಎರಡು ಪ್ರತ್ಯೇಕ ಕಾರ್ಯಗಳ ನಿರ್ವಹಣೆಗೆ ಬಟನ್‌ ಒತ್ತುವ ಸೌಲಭ್ಯ ಕಲ್ಪಿಸಲಾಗಿದೆ ಎಂದೂ ಅದು ಹೇಳಿದೆ. ಸ್ಕೈಪ್‌ ಮೂಲಕ ಕರೆ ಮಾಡಿ ಈ ಮಾದರಿಯ ಕಾರ್ಯಕ್ಷಮತೆಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಾರೆ.

ಆದರೂ, ಫೋನ್‌ ಕಾರ್ಯನಿರ್ವಹಣೆಗಾಗಿ ಅತ್ಯಲ್ಪ ಶಕ್ತಿಯ ಅಗತ್ಯವಿರುತ್ತದೆ. ಮುಂಬರುವ ದಿನಗಳಲ್ಲಿ ಮೊಬೈಲ್‌ ಗೋಪುರ ಹಾಗೂ ವೈ– ಫೈ ವ್ಯವಸ್ಥೆಗೂ ಇದೇ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT