ADVERTISEMENT

ಬ್ರಿಟನ್‌: ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಹಿಂದುಜಾ ಸಹೋದರರು

ಪಿಟಿಐ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST

ಲಂಡನ್‌: ಬ್ರಿಟನ್‌ನಲ್ಲಿರುವ ಏಷ್ಯಾ ಮೂಲದ ಅತಿ ಶೀಮಂತರ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಹಿಂದುಜಾ ಸಹೋದರರು ಮೊದಲ ಸ್ಥಾನದಲ್ಲಿದ್ದಾರೆ.

ಹಿಂದುಜಾ ಸಹೋದರರು ₹1.54 ಲಕ್ಷ ಕೋಟಿ ಸಂಪತ್ತು ಹೊಂದಿದ್ದಾರೆ. ಅವರ ಸಂಪತ್ತು ಕಳೆದ ವರ್ಷಕ್ಕಿಂತ ₹20,025  ಕೋಟಿಯಷ್ಟು ಹೆಚ್ಚಳವಾಗಿದೆ ಎಂದು   ಏಷ್ಯನ್‌ ಮೀಡಿಯಾ ಮತ್ತು ಮಾರ್ಕೆಟಿಂಗ್‌ ಸಂಸ್ಥೆ  ಹೇಳಿದೆ.

ಸಂಸ್ಥೆಯು ಏಷ್ಯಾ ಮೂಲದ 101 ಮಂದಿ ಅತಿ  ಶ್ರೀಮಂತರ ಪಟ್ಟಿಯನ್ನು ಸಿದ್ಧಪಡಿಸಿದೆ.

ADVERTISEMENT

ಪಟ್ಟಿಯಲ್ಲಿ ಉಕ್ಕು ಉದ್ಯಮಿ ಲಕ್ಷ್ಮಿ ಎನ್‌. ಮಿತ್ತಲ್‌ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ₹1.02  ಲಕ್ಷ ಕೋಟಿ  ಸಂಪತ್ತಿನ ಒಡೆಯರಾಗಿದ್ದಾರೆ.  ಇವರ ಸಂಪತ್ತು ಕಳೆದ ವರ್ಷಕ್ಕಿಂತ ₹5,840 ಕೋಟಿಯಷ್ಟು ಹೆಚ್ಚಳವಾಗಿದೆ. ಲಂಡನ್‌ನಲ್ಲಿರುವ ಹಿಂದುಜಾ ಸಹೋದರರಾದ ಶ್ರೀಚಂದ್‌, ಗೋಪಿ, ಜಿನಿವಾದಲ್ಲಿರುವ  ಪ್ರಕಾಶ್‌   ಹಾಗೂ ಅಶೋಕ್‌ ಒಡೆತನದ ಅಶೋಕ್‌ ಲೇಲ್ಯಾಂಡ್‌, ಇಂಡಸ್‌ಇಂಡ್‌ ಬ್ಯಾಂಕ್‌ ಹಾಗೂ ಇತರ ಸಂಸ್ಥೆಗಳ ಆದಾಯ ಹೆಚ್ಚಳವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.