ADVERTISEMENT

ಭಾರತ ಮೂಲದ ಸಿದ್ಧಾರ್ಥ ಧರ್ ಈಗ ಐಎಸ್‌ ಉಗ್ರ?

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಲಂಡನ್‌ (ಪಿಟಿಐ): ಸಿರಿಯಾವನ್ನು ತನ್ನ ನೆಲೆ ಮಾಡಿಕೊಂಡಿರುವ ಭಾರತೀಯ ಮೂಲದ 31 ವರ್ಷದ ಶಂಕಿತ ಐಎಸ್‌ ಉಗ್ರ­ನೊಬ್ಬ, ತಾನು ಎಕೆ 47 ಬಂದೂಕು ಹಾಗೂ ತನ್ನ ನವಜಾತ ಮಗುವಿನೊಂದಿಗೆ ಇರುವ ಚಿತ್ರವನ್ನು ಸಾಮಾಜಿಕ ಜಾಲ­ತಾಣ­ದಲ್ಲಿ ಬುಧವಾರ ಬೆಳಿಗ್ಗೆ ಹರಿಬಿಟ್ಟಿದ್ದಾನೆ.

ಮೂಲತಃ ಸಿದ್ಧಾರ್ಥ ಧರ್‌ ಎಂಬ ಹೆಸರಿನ ಈತ ತನ್ನ ಹೆಸರನ್ನು ಅಬು ರುಮೇಸ್ಹಾ ಎಂದು ಬದಲಿಸಿಕೊಂಡಿದ್ದಾನೆ. ತನ್ನ ಮಗುವು ಐಎಸ್‌ ಹಿಡಿತದಲ್ಲಿರುವ ಸಿರಿಯಾದಲ್ಲಿ ಬೆಳೆಯುತ್ತಿರುವುದಕ್ಕೆ ತನಗೆ ತುಂಬಾ ಸಂತಸವಾಗುತ್ತಿದೆ ಎದೂ ಆತ ಬಿಂಬಿಸಿಕೊಂಡಿದ್ದಾನೆ.

ಈತನನ್ನು ಇತರ ಎಂಟು ಆರೋಪಿಗಳ ಜತೆ ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆಪಾದನೆ ಮೇಲೆ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಈತ ಅಲ್ಲಿಂದ ಪರಾರಿಯಾದ. ಗರ್ಭಿಣಿ ಹೆಂಡತಿ ಹಾಗೂ ನಾಲ್ಕು ಚಿಕ್ಕ ಮಕ್ಕಳೊಂದಿಗೆ ಬ್ರಿಟನ್‌ ತೊರೆದ ಆತ  ಪ್ಯಾರಿಸ್‌ ಬಸ್ಸು ಹತ್ತಿದ. ಅಲ್ಲಿಂದ ಮುಂದಕ್ಕೆ ಸಿರಿಯಾ ಹೊಕ್ಕು, ಐಎಸ್‌ ಉಗ್ರ ಸಂಘಟನೆಯನ್ನು ಸೇರಿದ ಎನ್ನಲಾಗಿದೆ.

ಸಿರಿಯಾಕ್ಕೆ ಬಂದ ಮೇಲೆ ತಾನು ಇನ್ನೊಂದು ಗಂಡು ಮಗುವಿನ ತಂದೆಯಾ­ಗಿದ್ದೇನೆ ಎಂದು ಆತ ಜಾಲತಾಣದಲ್ಲಿ ತಿಳಿಸಿದ್ದಾನೆ. ಮುಂದೊಂದು ದಿನ ಬ್ರಿಟನ್‌ ಕೂಡ ಷರಿಯಾ ಕಟ್ಟಳೆಯಡಿಗೆ ಒಳಪಡು­ತ್ತದೆ ಎಂಬ ಆಶಾಭಾವವನ್ನೂ ಆತ ವ್ಯಕ್ತಪಡಿಸಿದ್ದಾನೆ.
ಇತ್ತೀಚೆಗೆ ಸುಮಾರು 500 ಬ್ರಿಟಿಷ್‌ ಪ್ರಜೆಗಳು ಇರಾಕ್‌ ಮತ್ತು ಸಿರಿಯಾಗೆ ಹೋಗಿ ಐಎಸ್‌ ಸಂಘಟನೆ ಸೇರಿಕೊಂಡಿ­ದ್ದಾರೆ ಎಂದು ಅಂದಾಜಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.