ADVERTISEMENT

ಭೂಕುಸಿತಕ್ಕೆ 32 ಬಲಿ , 9 ಮಂದಿ ಕಣ್ಮ ರೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST
ಪಶ್ಚಿಮ ಜಪಾನಿನ ಹಿರೋಶಿಮಾದಲ್ಲಿ ಮಂಗಳ­ವಾರ ಸಂಭವಿಸಿದ ಭೂ­ಕುಸಿತಕ್ಕೆ ಬಲಿ­­­ಯಾದ­ವರ­ ಮೃತದೇಹಗಳನ್ನು ಜಪಾನ್‌ ಭದ್ರತಾ ಪಡೆ ಯೋಧರು ಹಾಗೂ  ಪೊಲೀ­ಸರು ಪ್ಲಾಸ್ಟಿಕ್‌ ಚೀಲಗಳಲ್ಲಿ ಹೊತ್ತೊಯ್ದರು 	–ರಾಯಿಟರ್ಸ್‌ ಚಿತ್ರ
ಪಶ್ಚಿಮ ಜಪಾನಿನ ಹಿರೋಶಿಮಾದಲ್ಲಿ ಮಂಗಳ­ವಾರ ಸಂಭವಿಸಿದ ಭೂ­ಕುಸಿತಕ್ಕೆ ಬಲಿ­­­ಯಾದ­ವರ­ ಮೃತದೇಹಗಳನ್ನು ಜಪಾನ್‌ ಭದ್ರತಾ ಪಡೆ ಯೋಧರು ಹಾಗೂ ಪೊಲೀ­ಸರು ಪ್ಲಾಸ್ಟಿಕ್‌ ಚೀಲಗಳಲ್ಲಿ ಹೊತ್ತೊಯ್ದರು –ರಾಯಿಟರ್ಸ್‌ ಚಿತ್ರ   

ಟೋಕಿಯೊ (ಎಎಫ್‌ಪಿ): ಪಶ್ಚಿಮ ಜಪಾನಿನ ಹಿರೋಶಿಮಾದಲ್ಲಿ ಮಂಗಳ­ವಾರ ರಾತ್ರಿ ಸಂಭವಿಸಿದ ಭಾರಿ ಭೂಕು­ಸಿತಕ್ಕೆ 32 ಮಂದಿ ಬಲಿ­ಯಾ­ಗಿದ್ದು, 9 ಮಂದಿ ಕಣ್ಮರೆ­ಯಾಗಿ­ದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಗುಡ್ಡವೊಂದು 12ಕ್ಕೂ ಹೆಚ್ಚು ಮನೆಗಳ ಮೇಲೆ ಕುಸಿದಿದೆ. ಹಲವು ಮನೆಗಳು ನೆಲ­­ಸಮ­ವಾಗಿವೆ. ಗುಡ್ಡ ಕನಿಷ್ಠ 5 ಬಾರಿ­­­­­ಯಾದರೂ ಕುಸಿದಿದೆ. ಘಟನೆ­ಯಲ್ಲಿ ಬದು­­ಕು­­­ಳಿದವರು ಅವ­ಶೇಷ­ಗಳಲ್ಲಿ ಜೀವಂತ­­ವಾ­ಗಿ­ರು­ವವ­ರಿ­ಗಾಗಿ ಹುಡುಕು­ತ್ತಿದ್ದ ದೃಶ್ಯ­ಗಳನ್ನು ಇಲ್ಲಿನ ಟಿ.ವಿ. ವಾಹಿನಿ ಪ್ರಸಾರ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.