ADVERTISEMENT

ಮಾಜಿ ಪ್ರಧಾನಿ ರಾಜಾ ಪರ್ವೇಜ್‌ ದೋಷಿ

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಲಾಹೋರ್ : ಪಂಜಾಬ್ ಪ್ರಾಂತ್ಯದ ವಿದ್ಯುಚ್ಛಕ್ತಿ ವಿತರಣಾ ಕಂಪೆನಿಯಲ್ಲಿ ಕಾನೂನುಬಾಹಿರ ನೇಮಕಾತಿ ಮಾಡಿರುವ ಆರೋಪ ಹೊತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ರಾಜಾ ಪರ್ವೇಜ್‌ ಅಶ್ರಫ್ ಮತ್ತು ಎಂಟು ಜನರು ದೋಷಿ ಎಂದು ಸ್ಥಳೀಯ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಜೂನ್‌ 2012 ಹಾಗೂ ಮಾರ್ಚ್‌ 2013ರ ನಡುವೆ ಪ್ರಧಾನಿಯಾಗಿದ್ದ ವೇಳೆ, ಅಭ್ಯರ್ಥಿಗಳ ಅರ್ಹತೆಯನ್ನು ಪರಿಗಣಿಸದೇ 437ಮಂದಿಯನ್ನು ನೇಮಕ ಮಾಡಿಕೊಂಡಿರುವುದಾಗಿ ರಾಷ್ಟ್ರೀಯ ಹೊಣೆಗಾರಿಕಾ ಸಂಸ್ಥೆ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಕೋರ್ಟ್‌ ಈ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT