ADVERTISEMENT

‘ಮಾತುಕತೆಗೆ ಎಚ್‌ – 1ಬಿ ವೀಸಾ ಮಸೂದೆ ತೊಡಕಾಗದು’

ಪಿಟಿಐ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
‘ಮಾತುಕತೆಗೆ ಎಚ್‌ – 1ಬಿ  ವೀಸಾ ಮಸೂದೆ ತೊಡಕಾಗದು’
‘ಮಾತುಕತೆಗೆ ಎಚ್‌ – 1ಬಿ ವೀಸಾ ಮಸೂದೆ ತೊಡಕಾಗದು’   

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಡುವಿನ ಮಾತುಕತೆಗೆ ಎಚ್‌–1ಬಿ ವೀಸಾ ಮಸೂದೆ ತೊಡಕಾಗದು ಎಂದು  ಅಮೆರಿಕ ಭಾರತ  ವಾಣಿಜ್ಯ ವೇದಿಕೆ (ಯುಎಸ್‌ಐಬಿಸಿ) ಹೇಳಿದೆ.

ಇದೇ 26 ರಂದು ಮೊದಲ ಬಾರಿಗೆ ಮೋದಿ ಹಾಗೂ ಟ್ರಂಪ್‌ ಮಾತುಕತೆ ನಡೆಸಲಿದ್ದಾರೆ. 

‘ಇಬ್ಬರ ಭೇಟಿಯಿಂದ ಉಭಯ ರಾಷ್ಟ್ರಗಳಿಗೂ ಲಾಭವಾಗಲಿದೆ. ಈ  ನಿಟ್ಟಿನಲ್ಲಿ ಮಾತುಕತೆ ಯಶಸ್ವಿ ಯಾಗಲಿದೆ ಎಂಬ ಆಶಾಭಾವ ಹೊಂದಿದ್ದೇನೆ’ ಎಂದು ಯುಎಸ್‌ಐಬಿಸಿ ಅಧ್ಯಕ್ಷ ಮುಕೇಶ್‌ ಅಘಿ ಅಭಿಪ್ರಾಯಪಟ್ಟಿದ್ದಾರೆ.

‘ಉದ್ಯಮದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಮೆರಿಕಕ್ಕೆ ತಾಂತ್ರಿಕ ಸಂಪನ್ಮೂಲಗಳ ಅವಶ್ಯಕತೆಯಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.