ADVERTISEMENT

ಮಾತುಕತೆಗೆ ಗಡಿ ದಾಟಿ ದಕ್ಷಿಣ ಕೊರಿಯಾಕ್ಕೆ ಐತಿಹಾಸಿಕ ಭೇಟಿ ನೀಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌

ಏಜೆನ್ಸೀಸ್
Published 27 ಏಪ್ರಿಲ್ 2018, 4:16 IST
Last Updated 27 ಏಪ್ರಿಲ್ 2018, 4:16 IST
ದಕ್ಷಿಣ ಕೊರಿಯಾ– ಉತ್ತರ ಕೊರಿಯಾ ಅಧ್ಯಕ್ಷರ ಭೇಟಿ ಚಿತ್ರ: ಎಎನ್‌ಐ ಟ್ವೀಟ್‌
ದಕ್ಷಿಣ ಕೊರಿಯಾ– ಉತ್ತರ ಕೊರಿಯಾ ಅಧ್ಯಕ್ಷರ ಭೇಟಿ ಚಿತ್ರ: ಎಎನ್‌ಐ ಟ್ವೀಟ್‌   

ಸೋಲ್‌(ದಕ್ಷಿಣ ಕೊರಿಯಾ): ಉತ್ತರ ಕೊರಿಯಾ ಅಧ್ಯಕ್ಷ ಅಧ್ಯಕ್ಷ ಕಿಮ್ ಜಾಂಗ್ ಉನ್‌ ಅವರು ತಮ್ಮ ಗಡಿ ದಾಟುವ ಮೂಲಕ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ–ಇನ್‌ ಅವರನ್ನು ಭೇಟಿ ಮಾಡಿದ್ದಾರೆ.

1950–1953ರಲ್ಲಿ ನಡೆದ ಕೊರಿಯಾ ಯುದ್ಧದ ಬಳಿಕ ಉತ್ತರ ಕೊರಿಯಾ ನಾಯಕರೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಹಾಗೂ ಐತಿಹಾಸಿಕವೂ ಆಗಿದೆ.

ಕಿಮ್ ಜಾಂಗ್ ಉನ್‌ ಮತ್ತು ಮೂನ್‌ ಜೇ–ಇನ್‌ ಅವರು ಉಭಯ ದೇಶಗಳ ಮಿಲಿಟರಿ ನಿಷೇಧಿತ ಗಡಿ ಪ್ರದೇಶದಲ್ಲಿ ಭೇಟಿಯಾಗಿದ್ದಾರೆ.

ADVERTISEMENT

ಪನ್ಮುಂಜೊಮ್‌ನಲ್ಲಿ ಐತಿಹಾಸಿಕ ಅಂತರ ಕೊರಿಯಾ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಸ್ಥಳೀಯ ಕಾಲಮಾನ ಬೆಳಿಗ್ಗೆ 10.30ಕ್ಕೆ ಮಾತುಕತೆ ನಡೆಸಲಿದ್ದಾರೆ.

ಕೊರಿಯಾ ಶೃಂಗಸಭೆ ನಡೆಯುವ ‘ಪೀಸ್ ಹೌಸ್‌‘ ಪ್ರವೇಶಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ‘ಒಂದು ಹೊಸ ಇತಿಹಾಸ ಪ್ರಾರಂಭವಾಗುತ್ತದೆ’ ಮತ್ತು ‘ಶಾಂತಿ ಮರು ಸ್ಥಾಪನೆಗೆ ಐತಿಹಾಸಿಕ ಮುನ್ನುಡಿ’ ಎಂದು ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಸಿಎನ್‌ಎನ್‌ ವರದಿಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.