ADVERTISEMENT

ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಬಿಡುಗಡೆ: ಪಾಕಿಸ್ತಾನ ಕೋರ್ಟ್‌ ಆದೇಶ

ಏಜೆನ್ಸೀಸ್
Published 22 ನವೆಂಬರ್ 2017, 11:59 IST
Last Updated 22 ನವೆಂಬರ್ 2017, 11:59 IST
ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಬಿಡುಗಡೆ: ಪಾಕಿಸ್ತಾನ ಕೋರ್ಟ್‌ ಆದೇಶ
ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಬಿಡುಗಡೆ: ಪಾಕಿಸ್ತಾನ ಕೋರ್ಟ್‌ ಆದೇಶ   

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಾಗೂ ನಿಷೇಧಿತ ಜಮಾತ್‌ ಉದ್ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಬಿಡುಗಡೆ ಮಾಡಿ ಪಾಕಿಸ್ತಾನದ ಕೋರ್ಟ್ ಬುಧವಾರ ಆದೇಶಿಸಿದೆ.

ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್‌ನನ್ನು ಬಂಧಿಸಲಾಗಿತ್ತು. ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.

ಬಂಧನದ ಅವಧಿ 3 ತಿಂಗಳ ವರೆಗೂ ವಿಸ್ತರಿಸುವಂತೆ ಪಾಕಿಸ್ತಾನ ಸರ್ಕಾರ ಮಾಡಿದ್ದ ಮನವಿಯನ್ನು ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ತಿರಸ್ಕರಿಸಿ ಬಿಡುಗಡೆ ಆದೇಶ ನೀಡಿದೆ.

ADVERTISEMENT

2008ರ ನವೆಂಬರ್‌ 26ರಂದು ನಡೆದ ಮುಂಬೈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಈ ದಾಳಿ ನಡೆದು ಒಂಬತ್ತು ವರ್ಷ ಕಳೆಯುತ್ತಿರುವ ಸಮಯದಲ್ಲಿ ದಾಳಿಯ ರುವಾರಿ ಹಫೀಜ್ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.