ADVERTISEMENT

ಮುಂಬೈ ದಾಳಿ: ಹೆಚ್ಚಿನ ಪುರಾವೆ ಕೇಳಿದ ‍ಪಾಕ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 13:15 IST
Last Updated 30 ಜೂನ್ 2016, 13:15 IST
ಮುಂಬೈ ದಾಳಿ: ಹೆಚ್ಚಿನ ಪುರಾವೆ ಕೇಳಿದ ‍ಪಾಕ್‌
ಮುಂಬೈ ದಾಳಿ: ಹೆಚ್ಚಿನ ಪುರಾವೆ ಕೇಳಿದ ‍ಪಾಕ್‌   

ಇಸ್ಲಾಮಾಬಾದ್‌(ಪಿಟಿಐ): ಮುಂಬೈ ದಾಳಿ ಪ್ರಕರಣ ಸಂಬಂಧ ಲಷ್ಕರ್‌–‌ಎ–ತಯಬಾದ ಕಮಾಂಡರ್‌ ಜಕಿ ಉರ್‌ ರಹಮಾನ್‌ ಲಖ್ವಿ ಸೇರಿದಂತೆ ಆರು ಆರೋಪಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಭಾರತ ಇನ್ನೂ ಹೆಚ್ಚಿನ ಪುರಾವೆಗಳನ್ನು ಒದಗಿಸಬೇಕು ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಬಾಂಬ್‌ ದಾಳಿ ಪ್ರಕರಣ ಸಂಬಂಧ ಹೆಚ್ಚಿನ ಪುರಾವೆ ಒದಗಿಸುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಯು ಭಾರತದ ವಿದೇಶಾಂಗ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಭಾರತದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ನಫೀಸ್‌ ಜಕಾರಿಯಾ ಹೇಳಿದ್ದಾರೆ.

ಪತ್ರವನ್ನು ಯಾವಾಗ ಬರೆಯಲಾಗಿದೆ ಎಂಬುದರ ಬಗ್ಗೆ ನಫೀಸ್‌ ಜಕಾರಿಯಾ ಅವರು ವಿವರಣೆ ನೀಡಲಿಲ್ಲ.

166 ಜನ ಸಾವಿಗೀಡಾದ 2008ರ ಮುಂಬೈ ದಾಳಿ ಪ್ರಕರಣ ಸಂಬಂಧ  ಪಾಕಿಸ್ತಾನ ಲಷ್ಕರ್‌ ಎ ತಯಬಾ ಕಮಾಂಡರ್‌ ಜಕಿ ಉರ್‌ ರಹಮಾನ್‌ ಲಖ್ವಿ ಸೇರಿದಂತೆ ಆರು ಜನರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.