ADVERTISEMENT

ಮುಗಾಬೆ ರಾಜೀನಾಮೆಗೆ ಒತ್ತಡ

ಏಜೆನ್ಸೀಸ್
Published 16 ನವೆಂಬರ್ 2017, 19:50 IST
Last Updated 16 ನವೆಂಬರ್ 2017, 19:50 IST
ಮುಗಾಬೆ ರಾಜೀನಾಮೆಗೆ ಒತ್ತಡ
ಮುಗಾಬೆ ರಾಜೀನಾಮೆಗೆ ಒತ್ತಡ   

ಹರಾರೆ: ಜಿಂಬಾಬ್ವೆಯಲ್ಲಿ ಆಡಳಿತ ಯಂತ್ರವನ್ನು ಸೇನೆ ತನ್ನ ನಿಯಂತ್ರಣದಲ್ಲಿ ತೆಗೆದುಕೊಂಡ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ, ಯಾವುದೇ ರೀತಿ ಅಹಿತಕರ ಘಟನೆಗಳು ವರದಿಯಾಗಿಲ್ಲ.

ದೇಶದಲ್ಲಿ ಇನ್ನೂ ಅನಿಶ್ಚಿತತೆಯ ವಾತಾವರಣ ಸೃಷ್ಟಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ 100ಕ್ಕೂ ಹೆಚ್ಚು ಸಂಘಟನೆಗಳು ರಾಬರ್ಟ್‌ ಮುಗಾಬೆ ಅವರನ್ನು ಒತ್ತಾಯಿಸಿವೆ. ರಾಬರ್ಟ್‌ ಮುಗಾಬೆ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮೂಲಕ ಮುಗಾಬೆ ಅವರ ಮೂರುವರೆ ದಶಕಗಳ ಆಡಳಿತ ಅಂತ್ಯವಾಗಲಿದೆ.

ಸದ್ಯ ಮುಗಾಬೆ ಅವರು ಸೇನೆಯ ವಶದಲ್ಲಿದ್ದಾರೆ. ರಾಜಧಾನಿ ಹರಾರೆಯ ಬೀದಿಗಳಲ್ಲಿ ಯೋಧರನ್ನು ನಿಯೋಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.