ADVERTISEMENT

ಮುಗ್ಗರಿಸಿ ಬಿದ್ದ ಪೋಪ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಪೋಲೆಂಡ್‌ನ ಝೆಸ್ಟೊಚೊವಾದಲ್ಲಿನ ಜಾಸ್ನಾ ಗೊರಾ ಪಾದ್ರಿಗಳ ನಿವಾಸದಲ್ಲಿ ಪ್ರಾರ್ಥನಾ ವೇದಿಕೆಯಿಂದ ಇಳಿಯುತ್ತಿರುವಾಗ ಮುಗ್ಗರಿಸಿದ ಪೋಪ್‌ ಫ್ರಾನ್ಸಿಸ್‌ ಅವರು ಸಹಾಯಕರ ನೆರವಿನಿಂದ ಮೇಲೆದ್ದರು –ಎಎಫ್‌ಪಿ ಚಿತ್ರ
ಪೋಲೆಂಡ್‌ನ ಝೆಸ್ಟೊಚೊವಾದಲ್ಲಿನ ಜಾಸ್ನಾ ಗೊರಾ ಪಾದ್ರಿಗಳ ನಿವಾಸದಲ್ಲಿ ಪ್ರಾರ್ಥನಾ ವೇದಿಕೆಯಿಂದ ಇಳಿಯುತ್ತಿರುವಾಗ ಮುಗ್ಗರಿಸಿದ ಪೋಪ್‌ ಫ್ರಾನ್ಸಿಸ್‌ ಅವರು ಸಹಾಯಕರ ನೆರವಿನಿಂದ ಮೇಲೆದ್ದರು –ಎಎಫ್‌ಪಿ ಚಿತ್ರ   

ಝೆಸ್ಟೊಚೊವಾ (ಪೋಲೆಂಡ್) (ಎಎಫ್‌ಪಿ):  ಪೋಲೆಂಡ್ ಪ್ರವಾಸದಲ್ಲಿರುವ ಪೋಪ್‌ ಫ್ರಾನ್ಸಿಸ್‌ ಅವರು ಗುರುವಾರ ಇಲ್ಲಿನ ಪ್ರಾರ್ಥನಾ ವೇದಿಕೆ ಯಿಂದ ಕೆಳಗಿಳಿಯುವ ವೇಳೆ ಮುಗ್ಗರಿಸಿ ಬಿದ್ದ ಘಟನೆ ನಡೆಯಿತು.

ಕೆಲ ನಿಮಿಷಗಳ ಕಾಲ ನೆಲದ ಮೇಲೆ ಕುಳಿತ ಅವರು, ಸಹಾಯಕರ ನೆರವಿ ನಿಂದ ಮೇಲೆದ್ದು ನಿಂತರು. ಪೋಪ್‌ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅವರ ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿದೆ ಎಂದು ಮಾಧ್ಯಮ ಗಳು ವರದಿ ಮಾಡಿವೆ.

79 ವರ್ಷ ವಯಸ್ಸಿನ ಪೋಪ್‌ ಫ್ರಾನ್ಸಿಸ್‌ ಅವರು, ಸಾವಿರಾರು ಯಾತ್ರಿ ಕರು ಸೇರಿದ ಸಾಮೂಹಿಕ ಪ್ರಾರ್ಥನಾ ಸಮಾರಂಭದಲ್ಲಿ ಧರ್ಮ ಪ್ರವಚನ ನೀಡಿ ಮತ್ತು ದಿವ್ಯಪೂಜೆ ನಡೆಸಿಕೊಟ್ಟರು. ದಕ್ಷಿಣ ಪೊಲೆಂಡ್ನ ಝೆಸ್ಟೊ ಚೊವಾದಲ್ಲಿನ ಜಾಸ್ನಾ ಗೊರಾ ಪಾದ್ರಿಗಳ ಆಲಯಕ್ಕೆ  ಪೋಪ್‌ ಅವರು ಭೇಟಿ ನೀಡಿದ ವೇಳೆ ಈ ಘಟನೆ ನಡೆಯಿತು.

ಪೋಲೆಂಡ್ ಕ್ರೈಸ್ತ ಸನ್ಯಾಸಿಗಳ ತಾಣಕ್ಕೆ ಪೋಪ್‌ ಭೇಟಿ:  ವಿಶ್ವದ ಯುವ ಯಾತ್ರಾರ್ಥಿಗಳ ಭೇಟಿಗೆ ಮೊದಲು ಪೋಪ್‌ ಫ್ರಾನ್ಸಿಸ್‌ ಅವರು ಗುರುವಾರ ಇಲ್ಲಿನ ಕ್ರೈಸ್ತ ಸನ್ಯಾಸಿಗಳ ತಾಣಕ್ಕೆ ಭೇಟಿ ನೀಡಿದರು.

ಜೆಕೊಸ್ಲೊವಾದ ಈ ಪವಿತ್ರ ತಾಣದಲ್ಲಿ ಪವಾಡಗಳು ನಡೆಯುತ್ತವೆ ಎಂಬ ನಂಬಿಕೆ ಕೆಥೊಲಿಕ್‌ರಲ್ಲಿದೆ. ಕೆಥೋಲಿಕ್‌ ಯುವಕರ ಸಮಾ ವೇಶಕ್ಕೆ ಮೊದಲು ಪೋಪ್‌ ಅವರು ಬ್ಲ್ಯಾಕ್‌ ಮಡೊನ್ನ ಅವರೆದುರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT