ADVERTISEMENT

ಮುಲ್ಲಾ ಒಮರ್‌ಗೆ ಐಎಸ್‌ಐ ಆಶ್ರಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ವಾಷಿಂಗ್ಟನ್(ಪಿಟಿಐ): ತಾಲಿಬಾನ್‌ನ ಭೂಗತ ನಾಯಕ ಮುಲ್ಲಾ ಮುಹ­ಮ್ಮದ್‌ ಒಮರ್‌ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ರಕ್ಷಣೆ ನೀಡಿತ್ತು ಎಂಬ ಮಾಹಿತಿಯೊಂದು ಬಹಿರಂಗವಾಗಿದೆ. ಅಮೆರಿಕದ ಆಗಿನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅವರಿಗೆ ಬಂದಿದ್ದ ಈ- ಮೇಲ್‌ ಸಂದೇಶವೊಂದು ಈ ಮಾಹಿತಿಯನ್ನು ಒಳಗೊಂಡಿದೆ.

ಹಿಲರಿ ಅವರ ಖಾಸಗಿ ಸರ್ವರ್‌ನಲ್ಲಿದ್ದ  ಸುಮಾರು 4 ಸಾವಿರ ಈ- ಮೇಲ್‌ಗಳನ್ನು ಅಮೆರಿಕ ಸರ್ಕಾರ ಬಿಡುಗಡೆ ಮಾಡಿದೆ. ಮುಲ್ಲಾ ಒಮರ್‌ ಎರಡು ವರ್ಷಗಳ ಹಿಂದೆ ಕರಾಚಿಯ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ ಎನ್ನಲಾಗುತ್ತಿದೆ. ಆದರೂ ಪಾಕ್‌ ಮುಲ್ಲಾ ಒಮರ್‌ಗೂ ತನಗೂ ನೇರ ಸಂಪರ್ಕ ಇಲ್ಲ ಎಂದೇ ಹೇಳುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.