ADVERTISEMENT

ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ; 130ಕ್ಕೂ ಹೆಚ್ಚು ಮಂದಿ ಸಾವು

ಏಜೆನ್ಸೀಸ್
Published 20 ಸೆಪ್ಟೆಂಬರ್ 2017, 3:23 IST
Last Updated 20 ಸೆಪ್ಟೆಂಬರ್ 2017, 3:23 IST
ಕೃಪೆ: ರಾಯಿಟರ್ಸ್
ಕೃಪೆ: ರಾಯಿಟರ್ಸ್   

ಮೆಕ್ಸಿಕೊ ಸಿಟಿ: ಮೆಕ್ಸಿಕೊ ರಾಜಧಾನಿಯಾದ ಮೆಕ್ಸಿಕೊ ಸಿಟಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 139 ಮಂದಿ ಸಾವಿಗೀಡಾಗಿದ್ದಾರೆ.

ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಇಲ್ಲಿ ಉಂಟಾಗಿದ್ದು, ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಇನ್ನು ಕೆಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಹೆಚ್ಚಿನ ಕಟ್ಟಡಗಳ ನಡುವೆ ಜನರು ಸಿಲುಕಿಕೊಂಡಿದ್ದಾರೆ. ಭೂಕಂಪನದ ಅನುಭವವಾದೊಡನೆ ಜನರು ಕಚೇರಿ, ಮನೆಯಿಂದ ಹೊರ ಬಂದು ಬೀದಿಯಲ್ಲಿ ಓಡಾಡುವ ದೃಶ್ಯಗಳು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT