ADVERTISEMENT

ಮೆಲ್ಬರ್ನ್‌: ಪಾದ್ರಿ ಮೇಲೆ ಹಲ್ಲೆ

ಪಿಟಿಐ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಮೆಲ್ಬರ್ನ್‌: ಭಾರತ ಮೂಲದ ಪಾದ್ರಿ ಮೇಲೆ ಇಲ್ಲಿನ ಚರ್ಚ್‌ನಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಮೇಲ್ನೋಟಕ್ಕೆ ಇದನ್ನು ಜನಾಂಗೀಯ ದಾಳಿ ಎಂದು ಹೇಳಲಾಗಿದೆ.
 
ಫಾಕ್ನರ್‌ನ ಸೇಂಟ್‌ ಮ್ಯಾಥ್ಯೂ ಚರ್ಚ್‌ನ 48 ವರ್ಷದ ಪಾದ್ರಿ ಟಾಮಿ ಕಲತೂರ್ ಮ್ಯಾಥ್ಯೂ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ‘ಪಾದ್ರಿ ಭಾರತೀಯ ಮೂಲದವರಾಗಿರುವುದರಿಂದ ಅವರು ಹಿಂದು ಅಥವಾ ಮುಸ್ಲಿಂ ಇರಬಹುದು. ಹಾಗಾಗಿ ಪ್ರಾರ್ಥನೆ ಸಲ್ಲಿಸಲು ಅನರ್ಹರು’ ಎಂದು ಹಲ್ಲೆ ನಡೆಸಿದ ವ್ಯಕ್ತಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. 
 
ಭಾನುವಾರ ಸಾಮೂಹಿಕ ಪ್ರಾರ್ಥನೆ ಆರಂಭವಾಗುವ ಕೆಲವು ಕ್ಷಣಗಳ ಮೊದಲು, ಚರ್ಚ್‌ನ ಹೊರಾಂಗಣದಲ್ಲಿ ಈ ದಾಳಿ ನಡೆದಿದೆ. ದಾಳಿಗೆ ಸಂಬಂಧಿಸಿದಂತೆ 72 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
 
‘ಈ ದಾಳಿಗೆ ಯಾವುದೇ ಹಿನ್ನೆಲೆ ಇಲ್ಲ. ದಾಳಿ ನಡೆಸಿದ ವ್ಯಕ್ತಿ ಅಪಾಯಕಾರಿ ಎನ್ನಲು ಯಾವುದೇ ಕಾರಣ ಇಲ್ಲ’ ಎಂದು ಹಿರಿಯ ಕಾನ್‌ಸ್ಟೆಬಲ್‌ ರಿನ್ನಾನ್‌ ನಾರ್ಟನ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.