ADVERTISEMENT

ಮೋದಿ-ಷರೀಫ್ ಅನೌಪಚಾರಿಕ ಮಾತುಕತೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 11:25 IST
Last Updated 27 ನವೆಂಬರ್ 2014, 11:25 IST
ಸಾರ್ಕ್ ಶೃಂಗ ಸಭೆ ನಡೆದ ಸ್ಥಳದಿಂದ 20 ಕಿ.ಮೀ. ದೂರದ ಕಾರ್ವೆ ಜಿಲ್ಲೆಯ ದುಲಿಕೇಲ್ ನಲ್ಲಿ ವಿಶ್ರಾಂತಿಗಾಗಿ ಮುಖಂಡರಿಗೆ ನಿಯೋಜಿಸಿದ್ದ ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ ಕೊಯಿರಾಲ ಹಾಗೂ ಪಾಕಿಸ್ಥಾನದ ಪ್ರಧಾನಿ ನವಾಜ್ ಷರೀಫ್ ಅವರು ಜತೆಗಿದ್ದಾರೆ. -ಪಿಟಿಐ ಚಿತ್ರ

ಕಠ್ಮಂಡು(ಪಿಟಿಐ): ಇಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಮುಕ್ತಾಯದ ದಿನ ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಪರಸ್ಪರ ಅನೌಪಚಾರಿಕ ಮಾತುಕತೆ ನಡೆಸಿದರು.

ಸಾರ್ಕ್ ಶೃಂಗ ಸಭೆಗೆ ಭಾಗವಹಿಸಲು ತೆರಳಿದ್ದ ಇಬ್ಬರೂ ಪ್ರಧಾನಿಗಳು ಇಲ್ಲಿ ಪ್ರಥಮ ಬಾರಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ.

ಸಭೆ ನಡೆದ ಸ್ಥಳದಿಂದ 20 ಕಿ.ಮೀ. ದೂರದ ಕಾರ್ವೆ ಜಿಲ್ಲೆಯ ದುಲಿಕೇಲ್ ನಲ್ಲಿ ಮುಖಂಡರಿಗೆ ಆಯೋಜಿಸಿದ್ದ ಔತಣ ಕೂಟದ ವೇಳೆ ಮುಕ್ತ ವಾತಾವರಣದಲ್ಲಿ ಅವರು ಮಾತುಕತೆ ನಡೆಸಿದರು. ಈ ವೇಳೆ ಪರಸ್ಪರರು ಹಲವು ಪ್ರದೇಶಿಕ ವಿಷಯಗಳು ಕುರಿತು ಮಾತನಾಡಿದರು. ಆದರೆ, ಯಾವುದೇ ದ್ವೀಪಕ್ಷೀಯ ಮಾತುಕತೆ ಕುರಿತು ಚರ್ಚೆ ನಡೆಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾತುಕತೆ ವೇಳೆ ಸಾರ್ಕ್ ವಿದೇಶಾಂಗ ಸಚಿವರು ಉಪಸ್ಥಿತರಿದ್ದರು. ಬುಧವಾರವಷ್ಟೇ ಶೃಂಗ ಸಭೆಯ ಒಂದೇ ವೇದಿಕೆಯಲ್ಲಿ ಇಬ್ಬರು ಪ್ರಧಾನಿಗಳು ಆಸೀನರಾಗಿದ್ದರೂ ಪರಸ್ಪರ ಮುಖಕ್ಕೆ ಮುಖಕೊಟ್ಟು ಮಾತನಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.