ADVERTISEMENT

ಮ್ಯಾನ್ಮಾರ್‌: ಪ್ರಸಿದ್ಧ ನೀರು ಹಬ್ಬಕ್ಕೆ 285 ಜನ ಬಲಿ

1300 ಜನರಿಗೆ ಗಾಯ

ಏಜೆನ್ಸೀಸ್
Published 18 ಏಪ್ರಿಲ್ 2017, 5:04 IST
Last Updated 18 ಏಪ್ರಿಲ್ 2017, 5:04 IST
ಮ್ಯಾನ್ಮಾರ್‌: ಪ್ರಸಿದ್ಧ ನೀರು ಹಬ್ಬಕ್ಕೆ 285 ಜನ ಬಲಿ
ಮ್ಯಾನ್ಮಾರ್‌: ಪ್ರಸಿದ್ಧ ನೀರು ಹಬ್ಬಕ್ಕೆ 285 ಜನ ಬಲಿ   

ನೈಪೆ ತಾವ್‌: ಮ್ಯಾನ್ಮಾರ್‌ ದೇಶದಲ್ಲಿ ನಡೆದ ನೀರಿನ ಹಬ್ಬದ ವೇಳೆ 285 ಜನ ಮೃತಪಟ್ಟಿದ್ದು 1300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾನ್ಮಾರ್‌ ದೇಶದಲ್ಲಿ  ಈ ನೀರಿನ ಹಬ್ಬ ನಾಲ್ಕು ದಿನ ನಡೆಯುತ್ತದೆ. ದೇಶಾದ್ಯಂತ ಜರುಗುವ ಈ ನೀರಿನ ಹಬ್ಬಕ್ಕೆ  ಈ ಸಲ 285 ಜನ ಬಲಿಯಾಗಿದ್ದಾರೆ. ಯಾಂಗೂನ್ ಮತ್ತು ನೈಪೆ ತಾವ್‌ ಮಹಾನಗರಗಳಲ್ಲೂ 89 ಜನ ಸಾವನ್ನಪ್ಪಿದ್ದಾರೆ. 

ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಗಲಾಟೆ ಮಾಡಿದ್ದ 1200 ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ADVERTISEMENT

ಈ ನೀರಿನ ಹಬ್ಬವನ್ನು ಮ್ಯಾನ್ಮಾರ್‌ ನಲ್ಲಿ ಹೊಸ ವರ್ಷದ ಹಬ್ಬ ಎಂದು ಸಹ ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.