ADVERTISEMENT

ರಷ್ಯಾ: ಹೆಲಿಕಾಪ್ಟರ್ ದುರಂತದಲ್ಲಿ 15 ಜನರು ಸಾವು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 11:56 IST
Last Updated 26 ನವೆಂಬರ್ 2015, 11:56 IST

ಮಾಸ್ಕೊ, ರಷ್ಯಾ (ಪಿಟಿಐ): ರಷ್ಯಾದಲ್ಲಿ ನಾಗರಿಕ ಹೆಲಿಕಾಪ್ಟರ್‌ವೊಂದು ದುರಂತಕ್ಕೀಡಾಗಿ 15 ಜನರು ಮೃತಪಟ್ಟಿರುವ ಘಟನೆ ಸೈಬಿರಿಯಾದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

22 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಇದ್ದ ಎಂಐ8 ಹೆಲಿಕಾಪ್ಟರ್ ಪಶ್ಚಿಮ ಸೈಬಿರಿಯಾದ ಇಗಾರ್ಕಾ ಪಟ್ಟಣದ ಹೊರವಲಯದಲ್ಲಿ ಪತನಗೊಂಡಿದೆ.

‘ಹೆಲಿಕಾಪ್ಟರ್ ಪತನ ಘಟನೆಯಲ್ಲಿ 15 ಜನರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತೈಲ ಉತ್ಪಾದನಾ ಸ್ಥಳಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ ಇಗಾರ್ಕಾ ನಿಲ್ದಾಣದಿಂದ ಹೊರಟ 15 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.