ADVERTISEMENT

ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ

ಏಜೆನ್ಸೀಸ್
Published 19 ಮಾರ್ಚ್ 2018, 7:18 IST
Last Updated 19 ಮಾರ್ಚ್ 2018, 7:18 IST
ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ
ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ   

ಮಾಸ್ಕೊ (ಎಎಫ್‌ಪಿ): ವ್ಲಾದಿಮಿರ್‌ ಪುಟಿನ್‌ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾಗಿದ್ದಾರೆ. ಆ ಮೂಲಕ ಮತ್ತೆ 6 ವರ್ಷಗಳವರೆಗೂ ಪುಟಿನ್‌ ಅಧಿಕಾರದಲ್ಲಿ ಇರಲಿದ್ದಾರೆ.

ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿತ್ತು.

ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪ್ರಬಲ ಸ್ಪರ್ಧಿಗಳು ಇಲ್ಲದ ಕಾರಣ ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ದಾಖಲಿಸಿದ್ದಾರೆ.

ADVERTISEMENT

ಪುಟಿನ್ ಅವರ ಸಾಂಪ್ರದಾಯಿಕ ಎದುರುಳಿ ಪವೆಲ್ ಗ್ರೂದಿನ್ ಶೇ 11.6 ರಷ್ಟು ಮತಗಳನ್ನು ಮಾತ್ರ ಪಡೆದಿದ್ದಾರೆ. ಈ ಅಧ್ಯಕ್ಷಿಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಮೋಸ ಮಾಡಲಾಗಿದೆ ಎಂದು ವಿರೋಧ ಪಕ್ಷ ಆರೋಪ ಮಾಡಿದೆ.  2024ರವರೆಗೂ ಪುಟಿನ್‌ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್‌ ಯುವಕರ ಅಭ್ಯದಯಕ್ಕಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.