ADVERTISEMENT

ರಸಪ್ರಶ್ನೆ: ಭಾರತೀಯ ವಿದ್ಯಾರ್ಥಿಗಳಿಗೆ ಜಯ

ಸುದ್ದಿ ಸಂಕ್ಷಿಪ್ತ

ಏಜೆನ್ಸೀಸ್
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಸಿಂಗಪುರ: ಇಲ್ಲಿ ನಡೆದ ಪ್ರತಿಷ್ಠಿತ ‘ಸಿಂಗಪುರ ಟಾಟಾ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳು ಭಾರತೀಯ ವಿದ್ಯಾರ್ಥಿಗಳ ಪಾಲಾಗಿವೆ.

‘ಸಿಂಗಪುರ ಟಾಟಾ ಕ್ರೂಸಿಬಲ್ ಕ್ಯಾಂಪಸ್ ಕ್ವಿಜ್ –2017’ರಲ್ಲಿ  ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ರೋಹನ್ ನಾಯ್ಡು ಮತ್ತು ಶಿವಂ ಭಾರದ್ವಾಜ್ ಅವರ ತಂಡ ಮೊದಲ ಬಹುಮಾನ ತನ್ನದಾಗಿಸಿಕೊಂಡಿದೆ. ನಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಅರವಿಂದ್ ರಮೇಶ್ ಮತ್ತು ಅನ್ಶುಮಾನ್ ಆನಂದ್ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದೆ.
 
**
ಬಾಗ್ದಾದ್‌ನಲ್ಲಿ ಸ್ಫೋಟ: 45 ಸಾವು
ಬಾಗ್ದಾದ್‌: ಇರಾಕ್ ರಾಜಧಾನಿಯ ಬಾಯಾ ಎಂಬಲ್ಲಿ ಗುರುವಾರ ಸಂಜೆ ನಡೆದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 61ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಇಸ್ಲಾಮಿಕ್ ಸ್ಟೇಟ್‌ಗೆ ನಿಕಟವಾಗಿರುವ ದಿ ಅಮಾಕ್‌ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
 
**
ಜನವರಿಯಲ್ಲಿ ಹೆಚ್ಚು ತಾಪಮಾನ ದಾಖಲು
ನ್ಯೂಯಾರ್ಕ್‌: 137 ವರ್ಷಗಳ ಇತಿಹಾಸದಲ್ಲಿ  2017ರ ಜನವರಿ ಅತಿ ಹೆಚ್ಚು ತಾಪಮಾನ ಹೊಂದಿದ್ದ ಮೂರನೇ ಜನವರಿ ತಿಂಗಳು ಎಂದು ಜಾಗತಿಕ ತಾಪಮಾನದ ಬಗ್ಗೆ ಮಾಸಿಕ ವಿಶ್ಲೇಷಣೆ ನಡೆಸುವ ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ. 
 
ಕಳೆದ ತಿಂಗಳು ಜನವರಿಯಲ್ಲಿ 0.20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 2016ರ ಜನವರಿ ತಿಂಗಳಲ್ಲಿ 1.12 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.
 
2007ರ ಜನವರಿಯಲ್ಲಿ  0.96 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇದು ಅತಿ ಹೆಚ್ಚು ತಾಪಮಾನ ದಾಖಲಾದ ಎರಡನೇ ಜನವರಿಯಾಗಿದೆ. ಇನ್ನು 2017ರ ಜನವರಿ ಮೂರನೇ ಸ್ಥಾನ ಪಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.