ADVERTISEMENT

ರೊಹಿಂಗ್ಯಾ ನಿರಾಶ್ರಿತರಿಗೆ ಸಿಮ್ ಕಾರ್ಡ್ ಮಾರಾಟ ನಿಷೇಧ ಹೇರಿದ ಬಾಂಗ್ಲಾದೇಶ

ಏಜೆನ್ಸೀಸ್
Published 24 ಸೆಪ್ಟೆಂಬರ್ 2017, 11:03 IST
Last Updated 24 ಸೆಪ್ಟೆಂಬರ್ 2017, 11:03 IST
ರೊಹಿಂಗ್ಯಾ ನಿರಾಶ್ರಿತರಿಗೆ ಸಿಮ್ ಕಾರ್ಡ್ ಮಾರಾಟ ನಿಷೇಧ ಹೇರಿದ ಬಾಂಗ್ಲಾದೇಶ
ರೊಹಿಂಗ್ಯಾ ನಿರಾಶ್ರಿತರಿಗೆ ಸಿಮ್ ಕಾರ್ಡ್ ಮಾರಾಟ ನಿಷೇಧ ಹೇರಿದ ಬಾಂಗ್ಲಾದೇಶ   

ಢಾಕಾ: ರೊಹಿಂಗ್ಯಾ ನಿರಾಶ್ರಿತರಿಗೆ ಸಿಮ್ ಕಾರ್ಡ್ ಮಾರಾಟ ಮಾಡಬೇಡಿ ಎಂದು ಸಿಮ್ ಕಾರ್ಡ್ ಮಾರಾಟಗಾರರಿಗೆ ಬಾಂಗ್ಲಾದೇಶ ಸರ್ಕಾರ ಆದೇಶಿಸಿದೆ. ಭದ್ರತಾ ದೃಷ್ಟಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ನಾಲ್ಕೂವರೆ ಲಕ್ಷದಷ್ಟು ರೊಹಿಂಗ್ಯಾ ನಿರಾಶ್ರಿತರಿಗೆ ಸಿಮ್ ಕಾರ್ಡ್ ಮಾರಾಟ ಮಾಡಲು ಯತ್ನಿಸಿದರೆ ದಂಡ ತೆರಬೇಕಾದೀತು ಎಂದು ಸಿಮ್ ಮಾರಾಟಗಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈ ರೀತಿ ಸಿಮ್ ಕಾರ್ಡ್ ಮಾರಾಟಕ್ಕೆ ನಿಷೇಧ ಹೇರಿರುವುದರಿಂದ ರೊಹಿಂಗ್ಯಾಗಳಿಗೆ ಇನ್ನು ಮುಂದೆ ಬಾಂಗ್ಲಾದೇಶದಿಂದ ಸಿಮ್ ಸಿಗುವುದಿಲ್ಲ ಎಂದು ಟೆಲಿಕಾಂ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮಾನವೀಯತೆಯ ದೃಷ್ಟಿಯಲ್ಲಿ ರೊಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದೇಶ ಆಶ್ರಯ ನೀಡಿತ್ತು. ಅದೇ ವೇಳೆ ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಸರ್ಕಾರ  ತಯಾರಿಲ್ಲ ಎಂದು ಜೂನಿಯರ್ ಟೆಲಿಕಾಂ ಸಚಿವ ತರಾನಾ ಹಲೀಂ ಹೇಳಿದ್ದಾರೆ.ಹೊಸತಾಗಿ ಬಾಂಗ್ಲಾದೇಶಕ್ಕೆ ಬಂದಿರುವ ರೊಹಿಂಗ್ಯಾಗಳಿಗೆ ಬಯೋಮೆಟ್ರಿಕ್ ಕಾರ್ಡ್ ‍ಗಳನ್ನು ನೀಡಿದ ನಂತರವೇ ಈ ನಿಷೇಧ ಹಿಂಪಡೆಯಲಾಗುವುದು ಎಂದಿದ್ದಾರೆ ಹಲೀಂ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.