ADVERTISEMENT

ಲಾಟರಿ ಮೊತ್ತ ರೂ. 18 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಮ್ಯಾಡ್ರಿಡ್‌ (ಎಪಿ):  ಕ್ರಿಸ್‌ಮಸ್‌ ಸಮೀಪಿಸುತ್ತಿರುವಾಗಲೇ ಸ್ಪೇನ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ಮೊತ್ತದ ಲಾಟರಿ  ಯೋಜನೆ ಸಿದ್ಧಪಡಿಸಲಾಗಿದೆ. ಇದನ್ನು ವಿಶ್ವದ ಅತಿ ಶ್ರೀಮಂತ ಲಾಟರಿ  ಎನ್ನಲಾಗುತ್ತದೆ.

ರೂ. 18 ಸಾವಿರ ಕೋಟಿ  (3ಬಿಲಿಯನ್‌ ಅಮೆರಿಕನ್ ಡಾಲರ್‌) ಮೊತ್ತದ ಈ ಲಾಟರಿಯನ್ನು ಸಾವಿ­ರಾರು ವಿಜೇತರಿಗೆ ಹಂಚಲಾಗುತ್ತದೆ. ಮೊದಲ ಬಹುಮಾನದ ಮೊತ್ತ 4.9 ಲಕ್ಷ ಡಾಲರ್‌ (ಸುಮಾರು ರೂ. 3 ಕೋಟಿ). 24 ಅಮೆರಿ ಕನ್ ಡಾಲರ್‌ (ಸುಮಾರು ರೂ. 1440) ಈ ಲಾಟರಿ ಟಿಕೆಟ್‌ನ ಬೆಲೆ.

ರಾಜಪಕ್ಸೆಗೆ ಪಕ್ಷಾಂತರ ಸಮಸ್ಯೆ
ಕೊಲಂಬೊ (ಪಿಟಿಐ): 
ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸಂಪುಟದ ಮತ್ತೊಬ್ಬ ಸಚಿವ ಸೋಮವಾರ ಪಕ್ಷ ತೊರೆದು ಎದುರಾಳಿ ಪಕ್ಷಕ್ಕೆ ಸೇರಿದ್ದಾರೆ. ಜನವರಿಯಲ್ಲಿ ಅಧ್ಯಕ್ಷರ ಚುನಾವಣೆ ನಿಗದಿಯಾಗಿರುವಾಗಲೇ ರಾಜಪಕ್ಸೆಗೆ ಪಕ್ಷಾಂತರದ ಸಮಸ್ಯೆ ಎದುರಾಗಿದೆ.
ರಾಜಪಕ್ಸೆ ಸಂಪುಟದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ರಿಷದ್  ಬತಿಯುದೀನ್ ಸೋಮವಾರ ಪಕ್ಷ ತೊರೆದು, ಎದುರಾಳಿ ಪಕ್ಷದ ಅಭ್ಯರ್ಥಿ ಮೈತ್ರಿಪಾಲ ಸ್ರೀಸೇನಾ ಬೆಂಬಲಕ್ಕೆ ನಿಂತಿದ್ದಾರೆ. ಈವರೆಗೆ ರಾಜಪಕ್ಸೆ ಸಂಪುಟದ ಒಟ್ಟು ಆರು ಮಂದಿ ಪಕ್ಷಾಂತರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.