ADVERTISEMENT

ವಿಜ್ಞಾನಿ ದಂಪತಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ವಾಷಿಂಗ್ಟನ್‌ (ಎಎಫ್‌ಪಿ): ಅಣ್ವಸ್ತ್ರ ತಂತ್ರಜ್ಞಾನಕ್ಕೆ ಸಂಬಂಧಿಸಿದ ರಾಷ್ಟ್ರೀಯ ಗೋಪ್ಯ ಮಾಹಿತಿಯನ್ನು ಸೋರಿಕೆ ಮಾಡಲು ಯತ್ನಿಸಿದ ಅಪರಾಧಕ್ಕಾಗಿ ಅಮೆರಿಕದ ವಿಜ್ಞಾನಿ ದಂಪತಿಗೆ ಐದು ವರ್ಷಗಳ ಕಾಲ ಸೆರೆವಾಸ ವಿಧಿಸಲಾಗಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಣ್ವಸ್ತ್ರ ತಂತ್ರಜ್ಞಾನದ ರಹಸ್ಯ ಮಾಹಿತಿಯನ್ನು ಹಣದಾಸೆಗೆ ಸೋರಿಕೆ ಮಾಡುವ ಕುರಿತ ಎಫ್‌ಬಿಐ (ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ) ಏಜೆಂಟ್‌ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ವಿಜ್ಞಾನಿ ದಂಪತಿಯಾದ ಪೆಡ್ರೊ ಲಿಯೊನಾರ್ಡೊ ಮೆಸ್‌ಚೆರೊನಿ (79) ಮತ್ತು ಅವರ ಪತ್ನಿ ಮೆರ್ಜೊರಿ ರಾಕ್ಸ್‌ಬೈ ಮೆಸ್‌ಚೆರೊನಿ (71)  ಸಿಕ್ಕಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.