ಲಂಡನ್ (ಪಿಟಿಐ): ಬ್ರಿಟನ್ನಿಂದ ಗುಜರಾತ್ಗೆ ನೇರ ವಿಮಾನ ಸಂಚಾರ ಕಲ್ಪಿಸುವ ವಿಷಯವನ್ನು ಪರಿಶೀಲಿಸುವುದಾಗಿ ಇಲ್ಲಿ ಶನಿವಾರ ಮುಕ್ತಾಯವಾದ ‘ಪ್ರಾದೇಶಿಕ ಪ್ರವಾಸಿ ಭಾರತೀಯ ದಿವಸ’ ಮೇಳದಲ್ಲಿ ಭಾರತ ಭರವಸೆ ನೀಡಿದೆ.
‘ಲಂಡನ್ನಿಂದ ಅಹಮದಾಬಾದ್ಗೆ ನೇರ ವಿಮಾನ ಸಂಚಾರ ಆರಂಭಿಸುವಂತೆ ನಾವು ಏರ್ ಇಂಡಿಯಾಗೆ ಈ ಹಿಂದೆಯೇ ಮನವಿ ಮಾಡಿದ್ದೆವು. ಹಣಕಾಸು ಮತ್ತು ಅನುಷ್ಠಾನದಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಈ ವಿಷಯದಲ್ಲಿ ಮುಂದುವರಿಯಲು ಆಗಿರಲಿಲ್ಲ.
ಭಾರತಕ್ಕೆ ಹಿಂದಿರುಗಿದ ನಂತರ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸುವೆ’ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ (ಎಂಒಐಎ) ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ಕೆ. ಮನೋಜ್ ಕುಮಾರ್ ಅವರು ತಿಳಿಸಿದ್ದಾರೆ ಎಂದು ಅನಿವಾಸಿ ಭಾರತೀಯರ ಗುಂಪು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.