ADVERTISEMENT

ವಿಶ್ವ ಷೇರು ಮಾರುಕಟ್ಟೆಗೆ 136 ಲಕ್ಷ ಕೋಟಿ ನಷ್ಟ

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬಂದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 11:42 IST
Last Updated 25 ಜೂನ್ 2016, 11:42 IST
ವಿಶ್ವ ಷೇರು ಮಾರುಕಟ್ಟೆಗೆ 136 ಲಕ್ಷ ಕೋಟಿ ನಷ್ಟ
ವಿಶ್ವ ಷೇರು ಮಾರುಕಟ್ಟೆಗೆ 136 ಲಕ್ಷ ಕೋಟಿ ನಷ್ಟ   

ಸಿಂಗಪುರ (ಪಿಟಿಐ): ಐರೋಪ್ಯ ಒಕ್ಕೂಟದಿಂದ(ಇ.ಯು) ಬ್ರಿಟನ್‌ ಹೊರಗೆ ಬರಬೇಕು (ಬ್ರೆಕ್ಸಿಟ್‌) ಎಂದು ಜನ ತೀರ್ಪು ನೀಡಿದ್ದರ ಪರಿಣಾಮ ತಲ್ಲಣ ಸೃಷ್ಟಿಯಾಗಿರುವ ವಿಶ್ವ ಷೇರುಮಾರುಕಟ್ಟೆಯಲ್ಲಿ ಶುಕ್ರವಾರ ಒಟ್ಟಾರೆ ₹ 136 ಲಕ್ಷ ಕೋಟಿ ನಷ್ಟವಾಗಿದೆ.

ಸ್ಟರ್ಲಿಂಗ್‌ ಒಂದೇ ದಿನ ದಾಖಲೆ ಕುಸಿತ ಕಂಡಿದ್ದು, 31 ವರ್ಷಗಳ ಕನಿಷ್ಠಮಟ್ಟಕ್ಕೆ ಕುಸಿದಿದೆ. ಚಿನ್ನದ ಬೆಲೆ ಚೇರಿಕೆ ಕಂಡಿದೆ.

ಬ್ರಿಟನ್‌ ಒಕ್ಕೂಟದಲ್ಲಿಯೇ ಉಳಿಯಲಿದೆ ಎಂದು ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಆಘಾತ ಉಂಡು ಮಾಡಿದೆ. ಬ್ರಿಟನ್‌ ನಿರ್ಗಮನದ ಹಾದಿ ಹಿಡಿದಿರುವುದು ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.

ಶುಕ್ರವಾರ ಬೆಳಿಗ್ಗೆ ಒತ್ತಡಕ್ಕೆ ಸಿಲುಕಿದ್ದ ಹೂಡಿಕೆದಾರರು ಆರಂಭದಲ್ಲಿ ವಹಿವಾಟು ನಡೆಸಿದರು. ಬ್ರೆಕ್ಸಿಟ್‌ ಹೊರಹೋಗುವುದರಿಂದ ಯಾವುದೂ ಅಂತ್ಯಕಾಣುವುದಿಲ್ಲ ಎಂಬ ಸತ್ಯ ಅರಿವಾಗಿದೆ ಎಂದು ಅಮೆರಿಕದ ಬ್ಯಾಂಕ್‌ನ ಯೋಜನಾ ತಜ್ಞ ಜೆಫ್‌ ಕ್ರವೆಟ್ಸ್‌ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಯಿಂದ ಪ್ರಮುಖ ಬ್ಯಾಂಕ್‌ಗಳು ತುರ್ತು ಆರ್ಥಿಕ ನೀತಿ ರೂಪಿಸಲಿವೆ ಎಂಬ ಚರ್ಚೆಗಳಾಗತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.