ADVERTISEMENT

ಶಸ್ತ್ರಚಿಕಿತ್ಸೆಗೊಳಗಾಗಿದ್ದ ನವಾಜ್‌ ಷರೀಫ್‌ ಪತ್ನಿ ಆಸ್ಪತ್ರೆಯಿಂದ ಮನೆಗೆ

ಪಿಟಿಐ
Published 23 ಸೆಪ್ಟೆಂಬರ್ 2017, 13:37 IST
Last Updated 23 ಸೆಪ್ಟೆಂಬರ್ 2017, 13:37 IST
ಶಸ್ತ್ರಚಿಕಿತ್ಸೆಗೊಳಗಾಗಿದ್ದ ನವಾಜ್‌ ಷರೀಫ್‌ ಪತ್ನಿ ಆಸ್ಪತ್ರೆಯಿಂದ ಮನೆಗೆ
ಶಸ್ತ್ರಚಿಕಿತ್ಸೆಗೊಳಗಾಗಿದ್ದ ನವಾಜ್‌ ಷರೀಫ್‌ ಪತ್ನಿ ಆಸ್ಪತ್ರೆಯಿಂದ ಮನೆಗೆ   

ಲಂಡನ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರ ಪತ್ನಿ ಕುಲ್ಸುಮ್ ನವಾಜ್ ಅವರು ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಂಟಲು ಕ್ಯಾನ್ಸರ್‌ನ ಚಿಕಿತ್ಸೆಗಾಗಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಕುಲ್ಸುಮ್, ಶಸ್ತ್ರ ಚಿಕಿತ್ಸೆ ಬಳಿಕ ಎರಡು ದಿನ ಆಸ್ಪತ್ರೆಯಲ್ಲೇ ಉಳಿದಿದ್ದರು.

‘ದೇವರ ದಯೆಯಿಂದ ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಷರೀಫ್‌ ಪುತ್ರಿ ಮರಿಯಮ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪನಮಾ ಪೇಪರ್‌ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಷರೀಫ್‌ ಅವರನ್ನು, ಪ್ರಧಾನಿ ಹುದ್ದೆಯಿಂದ ಸುಪ್ರೀಂಕೋರ್ಟ್‌ ಅನರ್ಹಗೊಳಿಸಿತ್ತು. ಷರೀಫ್‌ ಅವರಿಂದ ತೆರವಾಗಿದ್ದ ಲಾಹೋರ್‌ ಕ್ಷೇತ್ರಕ್ಕೆ ಕಳೆದ ವಾರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಲ್ಸುಮ್ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.