ADVERTISEMENT

ಶಿಕ್ಷೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ

ಏಜೆನ್ಸೀಸ್
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST

ಸಾಲ್ಟ್‌ಲೇಕ್‌ ಸಿಟಿ, ಅಮೆರಿಕ: 12 ವರ್ಷದ ಬಾಲಕಿಯನ್ನು ಕಚ್ಚಿ ಮರಣದಂಡನೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ ಸಿಕ್ಕಿದೆ. 2016ರ ಅಕ್ಟೋಬರ್‌ನಲ್ಲಿ ಸಂತಕ್ವಿನ್‌ ನಗರದ ನ್ಯಾಯಾಧೀಶರು ನಾಯಿಗೆ ಶಿಕ್ಷೆ ವಿಧಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಡೆಕ್ಸ್‌ಟರ್‌ ಹೆಸರಿನ ಆಸ್ಟ್ರೇಲಿಯನ್‌ ಶೆಫರ್ಡ್‌ ನಾಯಿಯ ಮಾಲೀಕ ಲಿಂಡ್ಸಿ ಬ್ರೇ ಅವರು ದಂಡ ಪಾವತಿಸಲು ಗುರುವಾರ ಒಪ್ಪಿಗೆ ಸೂಚಿಸಿದ ನಂತರ ನಾಯಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ಯಾವುದೇ ಸಾಕುಪ್ರಾಣಿ ಮನುಷ್ಯನನ್ನು ಕಚ್ಚಿದರೆ, ಬೆನ್ನಟ್ಟಿದರೆ, ಹಿಂಸಿಸಿದರೆ ಐದು ದಿನ ಅದನ್ನು ಕೂಡಿ ಹಾಕಿ ನಿಗಾ ವಹಿಸಬೇಕು ಎಂಬ ನಿಯಮವಿದೆ. ನಾಯಿಗೆ ದಂಡ ವಿಧಿಸಿದ ಕ್ರಮವನ್ನು ದಿ ಹ್ಯೂಮನ್ ಸೊಸೈಟಿ ಖಂಡಿಸಿದ್ದು, ಬ್ರೇ ಅವರಿಗೆ ಬೆಂಬಲ ಸೂಚಿಸಿದೆ.

ADVERTISEMENT

‘ತನ್ನ ಯಜಮಾನನ ಜೊತೆ ವಾಕಿಂಗ್‌ ಹೋಗಿರುವಾಗ ಈ ಘಟನೆ ನಡೆದಿದೆ. ನಾಯಿ ಕಚ್ಚಿದ್ದರೂ ಬಾಲಕಿಯ ಚರ್ಮ ಕಿತ್ತು ಬಂದಿಲ್ಲ. ಐದು ವರ್ಷದ ವಯಸ್ಸಿನ ನಾಯಿ ಮೊದಲ ಬಾರಿಗೆ ಕಚ್ಚಿದ್ದರೂ, ನಿಯಮಗಳು ಬಹಳ ಕಠಿಣವಾಗಿವೆ’ ಎಂದು ಅದು ಹೇಳಿದೆ. ನಿಯಮಾವಳಿ ತಿದ್ದುಪಡಿ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸಂತಕ್ವಿನ್‌ ಸಿಟಿ ಕೌನ್ಸಿಲ್‌ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.