ADVERTISEMENT

ಸಹಪ್ರಯಾಣಿಕರ ಜತೆ ಮಾತನಾಡಿ

ಯಾತ್ರಿಗಳಿಗೆ ರಾಯಲ್‌ ಜೋರ್ಡಾನ್‌ ಸಲಹೆ

ಏಜೆನ್ಸೀಸ್
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST

ಜೋರ್ಡಾನ್‌ (ಎಎಫ್‌ಪಿ): ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳಿಂದ ತೆರಳುವ ವಿಮಾನಗಳಲ್ಲಿ ಲ್ಯಾಪ್‌ಟಾಪ್‌್ ಕೊಂಡೊಯ್ಯುವುದನ್ನು ನಿಷೇಧಿಸಿರುವ ಅಮೆರಿಕ ಮತ್ತು ಬ್ರಿಟನ್‌ನ ಕ್ರಮಕ್ಕೆ ಇಲ್ಲಿನ ‘ರಾಯಲ್‌ ಜೋರ್ಡನ್‌’ ವಿಮಾನ ಯಾನ ಸಂಸ್ಥೆ ಲಘು ಧಾಟಿಯ ಪ್ರತಿಕ್ರಿಯೆ ನೀಡಿದೆ.

ಈ ಸಂಸ್ಥೆ  ವಿಮಾನ ಹಾರಾಟದ  ವೇಳೆಯಲ್ಲಿ ಮಾಡಬಹುದಾದ ಕೆಲಸದ ಬಗ್ಗೆ ಪ್ರಯಾಣಿಕರಿಗೆ ಫೇಸ್‌ಬುಕ್‌ ಮೂಲಕ ಕೆಲವು ಸಲಹೆಗಳನ್ನು ನೀಡಿದೆ. ಸಂಸ್ಥೆ ತನ್ನ ಫೇಸ್‌ಬುಕ್‌ ಪುಟದಲ್ಲಿ 12 ಹಾಸ್ಯಮಯ ಸಲಹೆಗಳನ್ನು ನೀಡಿದೆ. ‘ಪುಸ್ತಕ ಓದಿ, ನಿಮ್ಮ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕರ ಜತೆ ಮಾತನಾಡಿ, ಧ್ಯಾನ ಮಾಡಿ, ವಿಮಾನಯಾನದ ವಿಸ್ಮಯವನ್ನು ಅನುಭವಿಸಿ...’ ಮುಂತಾದವು ಇದರಲ್ಲಿ ಸೇರಿವೆ.

‘ನಾವು ಜೋರ್ಡಾನಿಯನ್ನರು ಪರಸ್ಪರರನ್ನು ದಿಟ್ಟಿಸುವುದರಲ್ಲಿ ನಿಸ್ಸೀಮರು. ಮೇಲಿನ ಯಾವ ಸಲಹೆಯನ್ನೂ ಅನುಸರಿಸಲು ಸಾಧ್ಯವಾಗದಿದ್ದರೆ ದಿಟ್ಟಿಸುವ ಕೆಲಸವನ್ನೂ ಮಾಡಬಹುದು’ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದೆ. ರಾಯಲ್‌ ಜೋರ್ಡಾನ್‌ನ ಈ ಪೋಸ್ಟ್‌ಗೆ 10 ಸಾವಿರ ಲೈಕ್‌ಗಳು ಬಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.