ADVERTISEMENT

ಸೋಮಾಲಿಯ: ಉಗ್ರರ ಹತ್ಯೆ, ಹೋಟೆಲ್ ಭದ್ರತಾ ಪಡೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 10:18 IST
Last Updated 28 ಮಾರ್ಚ್ 2015, 10:18 IST
-ರಾಯಿಟರ್ಸ್ ಚಿತ್ರ
-ರಾಯಿಟರ್ಸ್ ಚಿತ್ರ   

ಮೊಗಾದಿಶು(ಪಿಟಿಐ): ಉಗ್ರರನ್ನು ಹೊಡೆದುರುಳಿಸಿರುವ ಸೋಮಾಲಿಯ ಭದ್ರತಾ ಪಡೆ ಉಗ್ರರ ವಶದಲ್ಲಿದ್ದ ಹೊಟೇಲ್ ಅನ್ನು ಶನಿವಾರ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ 17 ಮಂದಿ ಸಾವಿಗೀಡಾಗಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 

ಸೋಮಾಲಿಯದ ಮೊಗಾದಿಶು ನಗರದ ಮಕ ಅಲ್ ಮುಕರಾಮ್ ಹೊಟೇಲ್ ಮೇಲೆ ದಾಳಿ ನಡೆಸಿದ್ದ ಆಲ್ ಶಬಾಬ್ ಇಸ್ಲಾಮಿಕ್ ಸಂಘಟನೆಯ ಉಗ್ರರು 12 ತಾಸು ಹೊಟೇಲ್ ಅನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಉಗ್ರರನ್ನು ಹೊಡೆದುರಿಳಿಸಿ, ಹೊಟೇಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 17 ಮಂದಿ ಸಾವಿಗೀಡಾಗಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.  

ಉಗ್ರರನ್ನು ಹೊಡೆದುರುಳಿಸಿದ್ದು, ಹೊಟೆಲ್ ಸಂಪೂರ್ಣ ನಮ್ಮ ನಿಯಂತ್ರಣದಲ್ಲಿದೆ. ದಾಳಿಕೋರರು ಕಟ್ಟಡದ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಅಡಗಿಕೊಂಡಿದ್ದರು ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಭದ್ರತಾ ಪಡೆಯ ಪ್ರತಿದಾಳಿಯ ನಂತರ ಶನಿವಾರ ಸಿಬ್ಬಂದಿ ನಾಲ್ಕು ಶವಗಳನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಒಂಬತ್ತು ಮಂದಿಯ ಶವ ಲಭ್ಯವಾಗಿದ್ದವು. ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಹಸುನೀಗಿದ್ದಾರೆ. ಒಟ್ಟು 28 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.