ADVERTISEMENT

ಸ್ಯಾಮ್‌ಸಂಗ್ ಉಪಾಧ್ಯಕ್ಷನ ಬಂಧನ

ಏಜೆನ್ಸೀಸ್
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಸ್ಯಾಮ್‌ಸಂಗ್ ಉಪಾಧ್ಯಕ್ಷನ ಬಂಧನ
ಸ್ಯಾಮ್‌ಸಂಗ್ ಉಪಾಧ್ಯಕ್ಷನ ಬಂಧನ   
ಸೋಲ್: ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಲೀ ಜೇ–ಯಾಂಗ್ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಶುಕ್ರವಾರ ಬಂಧಿಸಲಾಗಿದೆ.
 
ಲಂಚ ನೀಡಿಕೆ ಮತ್ತು ಆಡಳಿತದ ಮೇಲೆ ಪ್ರಭಾವಬೀರಿದ ಪ್ರಕರಣ ಇದಾಗಿದೆ. ದಕ್ಷಿಣ ಕೊರಿಯಾ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಅವರು ವಾಗ್ದಂಡನೆಗೆ ಗುರಿಯಾಗಲೂ ಇದೇ ಪ್ರಕರಣ ಕಾರಣವಾಗಿದೆ.
 
‘ಹೊಸ ಸಾಕ್ಷ್ಯ ದೊರೆತಿರುವುದು ಮತ್ತು ಹೊಸದಾಗಿ ಅಪರಾಧ ಪ್ರಕರಣ ದಾಖಲಿಸಿರುವುದರಿಂದ ಲೀ ಜೇ–ಯಾಂಗ್ ಅವರನ್ನು ಬಂಧಿಸಲಾಗಿದೆ’ ಎಂದು ದಕ್ಷಿಣ ಕೊರಿಯಾದ ನ್ಯಾಯಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
 
ಕಂಪೆನಿಗೆ ಬೇಕಾದಂತೆ ನೀತಿ ರೂಪಿಸುವ ಸಲುವಾಗಿ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಅವರಿಗೆ 4 ಕೋಟಿ ಡಾಲರ್ (₹268 ಕೋಟಿ) ಲಂಚ ನೀಡಿದ್ದ ಆರೋಪ ಲೀ ಜೇ–ಯಾಂಗ್ ವಿರುದ್ಧ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.