ADVERTISEMENT

ಹಣ ದುರ್ಬಳಕೆ: ಅಬೆ ಸಂಪುಟದ ಇಬ್ಬರು ಸಚಿವೆಯರು ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 9:37 IST
Last Updated 20 ಅಕ್ಟೋಬರ್ 2014, 9:37 IST

ಟೋಕಿಯೊ(ಎಎಫ್‌ಪಿ): ರಾಜಕೀಯ ನಿಧಿ ದುರ್ಬಳಕೆ ಆರೋಪದ ಮೇಲೆ ಜಪಾನಿನ ಇಬ್ಬರು ಸಚಿವೆಯರು ಸೋಮವಾರ ರಾಜೀನಾಮೆ ನೀಡಿದ್ದು, ಪ್ರಧಾನಿ ಶಿಂಝೊ ಅಬೆ ಅವರು ಹಿನ್ನೆಡೆ ಅನುಭವಿಸಿದ್ದಾರೆ.

ಜಪಾನಿನ ಕೈಗಾರಿಕಾ ಸಚಿವೆ ಯುಕೊ ಒಬುಚಿ ಹಾಗೂ ಕಾನೂನು ಸಚಿವೆ ಮಿದೊರಿ ಮಸ್ತುಶಿಮಾ ರಾಜೀನಾಮೆ ನೀಡಿರುವವರು.

ಜನರ ಮತಗಳನ್ನು ಖರೀದಿಸುವ ಯತ್ನವಾಗಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳ ಆರೋಪಗಳು ಕೇಳಿ ಬಂದ ಕೆಲವೇ ದಿನಗಳಲ್ಲಿ ಉಭಯ ಸಚಿವೆಯರು ಸೋಮಾವಾರ ಪ್ರಧಾನಿ ಅಬೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಒಬುಚಿ ಹಾಗೂ ಮಸ್ತುಶಿಮಾ ಅವರ ರಾಜೀನಾಮೆಯಿಂದಾಗಿ ಅಬೆ ಸಂಪುಟದಲ್ಲಿದ್ದ ಮಹಿಳಾ ಸಚಿವರ ಸಂಖ್ಯೆ ಐದರಿಂದ ಮೂರಕ್ಕೆ ಇಳಿದಿದೆ.

ADVERTISEMENT

‘ರಾಜೀನಾಮೆ ನೀಡಿರುವ ಉಭಯ ಸಚಿವೆಯರನ್ನು ನಾನೇ ನೇಮಿಸಿದ್ದೆ. ಪ್ರಧಾನಿಯಾಗಿ ಇದರ ಹೊಣೆಯನ್ನು ಹೊರುತ್ತೇನೆ. ಜತೆಗೆ ಈ ಬಗ್ಗೆ ಕ್ಷಮೆಯಾಚಿಸುತ್ತೇನೆ’ ಎಂದು ಪ್ರತಿಕ್ರಿಯಿಸಿರುವ ಅಬೆ, ಶೀಘ್ರವೇ ಅವೆರಡೂ ಸ್ಥಾನಗಳನ್ನು ತುಂಬುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.