ADVERTISEMENT

ಹೈಡ್ರೋಜನ್ ಇಂಧನ ಚಾಲಿತ ಕಾರು ಶೀಘ್ರ ಬಳಕೆಗೆ?

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಹೈಡ್ರೋಜನ್ ಇಂಧನ ಚಾಲಿತ ಕಾರು
ಹೈಡ್ರೋಜನ್ ಇಂಧನ ಚಾಲಿತ ಕಾರು   

ಲಾಂಸ್ ಏಂಜಲೀಸ್: ಹೇರಳವಾಗಿ ಲಭ್ಯವಿರುವ ನಿಕ್ಕಲ್, ಕಬ್ಬಿಣ ಹಾಗೂ ಕೋಬಾಲ್ಟ್‌ನಂತಹ ಲೋಹಗಳನ್ನು ಬಳಸಿಕೊಂಡು ಹೈಡ್ರೋಜನ್ ಇಂಧನ ಉತ್ಪಾದಿಸುವ ಉಪಕರಣವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ಕಾರುಗಳನ್ನು ಬೃಹತ್ ಸಂಖ್ಯೆಯಲ್ಲಿ ರಸ್ತೆಗಿಳಿಸುವ ಕನಸಿಗೆ ರೆಕ್ಕೆ ಮೂಡಿಸಿದೆ. ಈ ಉಪಕರಣವು ಸೌರಶಕ್ತಿಯನ್ನು ಅಗ್ಗದ ದರದಲ್ಲಿ ಉತ್ಪಾದಿಸುವ ಹಾಗೂ ಸಂಗ್ರಹಿಸುವ ಸಾಧನವಾಗಿಯೂ ಕೆಲಸ ಮಾಡಲಿದೆ.

‘ವಾಹನಗಳಿಗೆ ಹೈಡ್ರೋಜನ್ ಒಂದು ಅದ್ಭುತ ಇಂಧನ. ಇದು ಲಭ್ಯವಿರುವ ಇಂಧನಗಳಲ್ಲಿ ಶುದ್ಧವಾದುದು. ಅಗ್ಗವೂ ಆಗಿದ್ದು, ಮಾಲಿನ್ಯದ ಬದಲಾಗಿ ನೀರನ್ನು ಇದು ಹೊರಚೆಲ್ಲುತ್ತದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಿಚರ್ಡ್ ಕನೀರ್ ಹೇಳಿದ್ದಾರೆ.

‘ಇದು ಹೈಡ್ರೋಜನ್ ಕಾರುಗಳ ದರವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತದೆ . ವಿದ್ಯುತ್ ಹಾಗೂ ಇಂಧನ ಎರಡನ್ನೂ ಒಂದೇ ಉಪಕರಣ ಉತ್ಪಾದಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.