ADVERTISEMENT

ಹೈದರಾಬಾದ್‌ನ ರೋಹಿತ್‌ಗೆ ಮಿಸ್ಟರ್‌ ವರ್ಲ್ಡ್‌ ಕಿರೀಟ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಹೈದರಾಬಾದ್‌ನ ರೋಹಿತ್‌ಗೆ ಮಿಸ್ಟರ್‌ ವರ್ಲ್ಡ್‌ ಕಿರೀಟ
ಹೈದರಾಬಾದ್‌ನ ರೋಹಿತ್‌ಗೆ ಮಿಸ್ಟರ್‌ ವರ್ಲ್ಡ್‌ ಕಿರೀಟ   

ಲಂಡನ್‌ (ಪಿಟಿಐ): ಹೈದರಾಬಾದ್‌ ಮೂಲದ ರೋಹಿತ್‌ ಖಂಡೆಲ್‌ವಾಲ್‌ ಅವರು 2016ರ ಮಿಸ್ಟರ್‌ ವರ್ಲ್ಡ್‌ ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಈ ಬಿರುದು ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬ್ರಿಟನ್‌ನ ಸೌತ್‌ಪೋರ್ಟ್‌ ಥಿಯೇಟರ್‌ ಹಾಗೂ ಕನ್ವೆನ್‌ಷನ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಅಂತಿಮ ಸುತ್ತಿನಲ್ಲಿ 26 ವರ್ಷದ ರೋಹಿತ್‌  ವಿಶ್ವದ ನಾನಾ ಕಡೆಗಳಿಂದ ಸ್ಪರ್ಧಿಸಿದ್ದ 46 ಜನರನ್ನು ಸೋಲಿಸಿದರು.

ವಿನ್ಯಾಸಕಿ ನಿವೇದಿತಾ ಸಬೂ ಅವರು ವಿನ್ಯಾಸಪಡಿಸಿರುವ ಪೋಷಾಕು ಧರಿಸಿದ್ದ  ರೋಹಿತ್‌  ₹33 ಲಕ್ಷ ಬಹುಮಾನದ ಜೊತೆಗೆ ಮಿಸ್ಟರ್‌ ವರ್ಲ್ಡ್‌ ಬಿರುದಿಗೆ ಪಾತ್ರರಾದರು.  ‘ಮಿಸ್ಟರ್‌ ವರ್ಲ್ಡ್‌ ಬಿರುದು ಪಡೆದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಬಿರುದು ಪಡೆದ ಮೊದಲ ಭಾರತೀಯನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.