ADVERTISEMENT

ಹೊಸ್ನಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:17 IST
Last Updated 24 ಮಾರ್ಚ್ 2017, 19:17 IST
ಹೊಸ್ನಿ ಬಿಡುಗಡೆ
ಹೊಸ್ನಿ ಬಿಡುಗಡೆ   

ಕೈರೊ (ಐಎಎನ್‌ಎಸ್‌): 2011ರ ಈಜಿಪ್ಟ್ ದಂಗೆಯಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಚಳವಳಿಗಾರರ ಹತ್ಯೆ ಮಾಡಿದ ಆರೋಪದಡಿ ಜೈಲು ಪಾಲಾಗಿದ್ದ ಈಜಿಪ್ಟ್‌ನ ಮಾಜಿ ಪ್ರಧಾನಿ ಹೊಸ್ನಿ ಮುಬಾರಕ್‌ ಬಿಡುಗಡೆಯಾಗಿದ್ದಾರೆ.

ಹೊಸ್ನಿ ಕಳೆದ ಕೆಲವು ವರ್ಷಗಳಿಂದ ಮಾದಿ ಸೇನಾ ಆಸ್ಪತ್ರೆಯಲ್ಲಿ ಬಂಧನದಲ್ಲಿದ್ದರು. ಬಿಡುಗಡೆಯ ನಂತರ ಅವರು ಹೆಲಿಯೊಪೊಲಿಸ್‌ನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ ಎಂದು ಅವರ ವಕೀಲ ಫರೀದ್‌ ಎಲ್‌ ದೀಬ್‌ ಹೇಳಿದ್ದಾರೆ.

ಚಳವಳಿಗಾರರ ಹತ್ಯೆಗೆ ಸಂಬಂಧಿಸಿದಂತೆ ಮುಬಾರಕ್‌ ಕಳೆದ ಆರು ವರ್ಷಗಳಲ್ಲಿ ಹಲವು ವಿಚಾರಣೆಗಳನ್ನು ಎದುರಿಸಿದ್ದಾರೆ. 2012ರಲ್ಲಿ ಮುಬಾರಕ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.   

ADVERTISEMENT

2013ರಲ್ಲಿ ನ್ಯಾಯಾಲಯವು ಹೊಸ್ನಿ ಹಾಗೂ ಅವರ ಏಳು ಸಂಗಡಿಗರನ್ನು  ಆರೋಪದಿಂದ ಮುಕ್ತಗೊಳಿಸಿತ್ತು. ಆದರೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತೆ ಮೇಲ್ಮನವಿ ಸಲ್ಲಿಸಿದ್ದರು.

ಇತ್ತೀಚೆಗೆ ಈಜಿಪ್ಟ್‌ ಮೇಲ್ಮನವಿ ನ್ಯಾಯಾಲಯ ಮುಬಾರಕ್‌ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.