ADVERTISEMENT

‘ಲಂಡನ್‌ ಟ್ಯೂಬ್‌’ ಸ್ಫೋಟ ಉಗ್ರ ಮಹಿಳೆಯ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST

ಲಂಡನ್‌ (ಪಿಟಿಐ):  ಲಂಡನ್‌ನ ಪ್ರತಿಷ್ಠಿತ ಸುರಂಗ ರೈಲು ಮಾರ್ಗವನ್ನು ಸದ್ಯದಲ್ಲೇ ಸ್ಫೋಟಿಸುವುದಾಗಿ ಶಂಕಿತ ಐಎಸ್‌ ಉಗ್ರರ ಸಂಘಟನೆಯ ಸದಸ್ಯೆ ಸ್ಯಾಲಿ ಜೋನ್ಸ್‌ ಬೆದರಿಕೆ ಹಾಕಿದ್ದಾಳೆ.

ಐಎಸ್ ಸಂಘಟನೆಯೊಳಗೆ ‘ಮಿಸೆಸ್‌ ಟೆರರ್‌’ ಎಂದೇ ಹೆಸರಾಗಿರುವ ಸ್ಯಾಲಿ  ಈ ಬಗ್ಗೆ ಟ್ವೀಟ್‌  ಮಾಡಿದ್ದಾಳೆ ಎಂದು ‘ದ ಟೈಮ್ಸ್‌’ ವರದಿ ಮಾಡಿದೆ.
‘ಲಂಡನ್‌.. ಬೂಮ್‌’ ಎಂಬ ಒಕ್ಕಣೆಯೊಂದಿಗೆ ಟ್ವೀಟ್‌ ಕೊನೆಗೊಂಡಿದ್ದು, ಇದಾದ ಬಳಿಕ ಆಕೆಯ ಟ್ವಿಟರ್‌ ಖಾತೆ ವಜಾ ಆಗಿದೆ.

ಕಪ್ಪು ಕುರ್ತಾ ಧರಿಸಿರುವ ತನ್ನ ಫೋಟೊವನ್ನೂ ಆಕೆ ಅಪ್‌ಲೋಡ್‌ ಮಾಡಿದ್ದು, ‘ಇರಾಕ್‌ನ ಟೈಗ್ರಿಸ್‌ ನದಿ’ ಎಂಬ ಅಡಿಟಿಪ್ಪಣಿಯನ್ನೂ ಬರೆದಿದ್ದಳು.
ಬರ್ಮಿಂಗ್‌ಹ್ಯಾಂ ಮೂಲದ ಐಎಸ್‌ ಕಾರ್ಯಕರ್ತ ಜುನೈದ್‌ ಹುಸೈನ್‌ ಎಂಬಾತನನ್ನು ಆಕೆ ವಿವಾಹವಾಗಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.