ADVERTISEMENT

₹1624 ಕೋಟಿ ಸೇನಾ ನೆರವಿಗೆ ತಡೆ

ಭಯೋತ್ಪಾದಕ ಚಟುವಟಿಕೆ ನಿಯಂತ್ರಣ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕ

ಪಿಟಿಐ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ವಾಷಿಂಗ್ಟನ್‌: ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ₹1,624 ಕೋಟಿ (255 ಮಿಲಿಯನ್‌ ಡಾಲರ್‌) ಸೇನಾ ನೆರವಿಗೆ ಅಮೆರಿಕ ತಡೆ ನೀಡಿರುವುದನ್ನು ಶ್ವೇತಭವನ ಖಚಿತಪಡಿಸಿದೆ.

ತನ್ನ ನೆಲದಲ್ಲಿರುವ ಭಯೋತ್ಪಾದಕ ಚಟುವಟಿಕೆ ನಿಯಂತ್ರಣ ನಿಟ್ಟಿನಲ್ಲಿ ಇಸ್ಲಾಮಾಬಾದ್‌ ಕೈಗೊಳ್ಳುವ ಕ್ರಮಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

‘ಕಳೆದ 15 ವರ್ಷಗಳಿಂದ ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ₹ 2.10 ಲಕ್ಷ ಕೋಟಿ (33 ಬಿಲಿಯನ್‌ ಡಾಲರ್‌) ನೆರವು ನೀಡುತ್ತಾ ಬಂದಿದೆ. ಅದಕ್ಕೆ ಪ್ರತಿಯಾಗಿ ಸುಳ್ಳು, ವಂಚನೆ ಬಿಟ್ಟು ಏನನ್ನೂ ನೀಡಿಲ್ಲ’ ಎಂದು ಟ್ರಂಪ್‌ ಮಂಗಳವಾರ ಟ್ವೀಟ್‌ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.