ADVERTISEMENT

ಕ್ಷಯರೋಗ ತಡೆಗೆ ‘ಕೃತಕ ಬುದ್ಧಿಮತ್ತೆ’

ಪಿಟಿಐ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಲಾಸ್ಏಂಜಲೀಸ್: ಭಾರತದಲ್ಲಿ ಕ್ಷಯರೋಗದ ಹರಡುವಿಕೆಯನ್ನು ಜಾಗೃತಿ ಅಭಿಯಾನಕ್ಕಿಂತಲೂ ಯಶಸ್ವಿಯಾಗಿ ತಡೆಗಟ್ಟಬಹುದಾದ ’ಕೃತಕ ಬುದ್ಧಿಮತ್ತೆ’ ಆಧರಿತ ಹೊಸ ವಿಧಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಕ್ಷಯರೋಗದ ಗುಣಲಕ್ಷಣ, ಅದು ಹೆಚ್ಚಾಗಿ ಕಾಣಬರುವ ಪ್ರದೇಶ, ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬ ಮಾಹಿತಿಯನ್ನು ವಿಶ್ಲೇಷಿಸಿ ಹೊಸ ವ್ಯಾಖ್ಯಾನವೊಂದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕ್ಷಯರೋಗ ಹೆಚ್ಚಾಗಿ ಬರುವ ಸಾಧ್ಯತೆ ಇರುವವರು ಈ ವ್ಯಾಖ್ಯಾನದಡಿ ಇರುತ್ತಾರೆ. ನಿರ್ದಿಷ್ಟವಾಗಿ ಇವರಿಗೇ ರೋಗದ ಬಗ್ಗೆ ಹೆಚ್ಚು ತಿಳಿವಳಿಕೆ ನೀಡುವ ವ್ಯವಸ್ಥೆ ಇದಾಗಿದೆ.

‘ಅಗತ್ಯವಿಲ್ಲದ ಕಡೆಯಲ್ಲೂ ಜಾಗೃತಿ ಕಾರ್ಯಕ್ರಮ ನಡೆಸುವ ಬದಲು, ಲಭ್ಯವಿರುವ ಕಡಿಮೆ ಸಂಪನ್ಮೂಲವನ್ನೇ ಪರಿಣಾಮಕಾರಿಯಾಗಿ ಬಳಸುವುದು ಇದರಿಂದ ಸಾಧ್ಯ’ ಎಂಬುದು ಸಂಶೋಧಕರ ಅಭಿಪ್ರಾಯ.

ADVERTISEMENT

‘ಅತ್ಯಾಧುನಿಕ ವಿಶ್ಲೇಷಣೆಯಿಂದಾಗಿ ರೋಗ ಹರಡುವಿಕೆಯನ್ನು ಗಮನಾರ್ಹವಾಗಿ ತಗ್ಗಿಸಬಹುದು. ನಾವು ಸ್ವಲ್ಪ ಚುರುಕಾಗಿ ಯೋಚಿಸುವುದರಿಂದಾಗಿ ಹೆಚ್ಚು ಜೀವಗಳನ್ನು ಉಳಿಸಬಹುದು’ ಎಂದು ಕ್ಯಾಲಿಫೋರ್ನಿಯಾದ ಸದರ್ನ್ ವಿಶ್ವವಿದ್ಯಾಲಯದ ಪಿಎಚ್.ಡಿ ಅಭ್ಯರ್ಥಿ ಬ್ರ್ಯಾನ್ ವೈಲ್ಡರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.