ADVERTISEMENT

ಭಾರತ ವಿದ್ಯಾರ್ಥಿಗಳಿಗೆ ಕೆನಡಾ ವೀಸಾ ಸುಲಭ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 18:48 IST
Last Updated 25 ಜೂನ್ 2018, 18:48 IST

ಟೊರಾಂಟೊ (ಪಿಟಿಐ): ಕೆನಡಾದಲ್ಲಿ ಅಧ್ಯಯನ ಮಾಡುವ ಭಾರತದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಸುಲಭವಾಗಿ ವೀಸಾ ದೊರೆಯಲಿದೆ. ವೀಸಾ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಭಾರತದ ಜತೆ ಚೀನಾ, ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್ ದೇಶಗಳ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ದೊರೆಯಲಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಭಾರತದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆನಡಾದಲ್ಲಿದ್ದಾರೆ.

ಸರಳ ವೀಸಾ ಪ್ರಕ್ರಿಯೆಯಿಂದ ಭಾರತವನ್ನು ಹೊರಗಿಡುವುದಾಗಿ ಬ್ರಿಟನ್ ಇತ್ತೀಚೆಗೆ ಘೋಷಣೆ ಮಾಡಿತ್ತು. ಇದಾದ ನಂತರ ಕೆನಡಾ, ಭಾರತದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಕೆನಡಾ ಪ್ರಮುಖ ದೇಶವಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ವೀಸಾ ನಿಯಮವನ್ನು ವಿದ್ಯಾರ್ಥಿಗಳಿಗೆ ಸರಳ ಮಾಡಲಾಗಿದೆ ಎಂದು ವಲಸೆ, ನಿರಾಶ್ರಿತ ಮತ್ತು ಪೌರತ್ವ ಇಲಾಖೆ (ಐಆರ್‌ಸಿಸಿ) ಹೇಳಿದೆ.
ಈ ಅವಕಾಶವನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಭಾಷೆಯ ಮಟ್ಟದಂತಹ ಕೆಲವು ವಿಷಯಗಳಲ್ಲಿ ಈಗಿರುವುದಕ್ಕಿಂತ ಹೆಚ್ಚು ಕಠಿಣ ಅಗತ್ಯಗಳನ್ನು ಪೂರೈಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.