ADVERTISEMENT

‘ಇಂಚಿರಾ’ ತಂದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:30 IST
Last Updated 11 ಮೇ 2017, 19:30 IST
‘ಇಂಚಿರಾ’ ತಂದ ಅದೃಷ್ಟ
‘ಇಂಚಿರಾ’ ತಂದ ಅದೃಷ್ಟ   

ನಮ್ಮನೆಯ ಹೆಸರು ‘ಇಂಚಿರಾ’. ಗೃಹಪ್ರವೇಶವಾಗಿ ಕಳೆದ ಏಪ್ರಿಲ್‌ಗೆ ಹದಿನೈದು ವರ್ಷವಾಯಿತು. ನಮ್ಮ ಮನೆಯು ಅರೇಹಳ್ಳಿ ಏಜೀಸ್‌ ಲೇಔಟ್‌ನಲ್ಲಿ ಇದೆ. ಮನೆ ಕಟ್ಟಿ ಮುಗಿದ ಮೇಲೆ ಅದಕ್ಕೊಂದು ಚೆಂದದ ಹೆಸರಿಡುವ ಜವಾಬ್ದಾರಿ ನನ್ನದೇ ಆಗಿತ್ತು.

ಮನೆ ಕಟ್ಟಲು ಮನೆಮಂದಿಯ ಶ್ರಮಿವಿದ್ದ ಕಾರಣ ಎಲ್ಲರ ಹೆಸರನ್ನು ಜೋಡಿಸಿ ಇಡುವುದು ನನ್ನ ಬಯಕೆಯಾಗಿತ್ತು. ಈ ಕಾರಣಕ್ಕೆ ಮನೆಗೆ ‘ಇಂಚಿರಾ’ ಎಂಬ ಹೆಸರಿಟ್ಟಿದ್ದೇನೆ. ಇದರಲ್ಲಿ ನನ್ನ ಹೆಸರಿನ ಜೊತೆಗೆ ಪತಿ ಮತ್ತು ಮಗನ ಹೆಸರೂ ಸೇರಿಕೊಂಡಿದೆ.

ಕೆಲ ದಿನಗಳ ಹಿಂದೆ ಮನೆಯ ಮೇಲೆ ಮತ್ತೆರಡು ಮನೆ ಕಟ್ಟಿದ್ದೇವೆ. ಅದಕ್ಕೆ ನನ್ನ ಪೋಷಕರು ಮತ್ತು ಪತಿಯ ಪೋಷಕರ ಹೆಸರನ್ನು ಜೋಡಿಸಿ  ವಿರ– ಸುರಾ ಎಂಬ ಪ್ರಾಸಬದ್ಧವಾಗಿರುವ ಹೆಸರು ಇಟ್ಟಿದ್ದೇವೆ. ಮೂರು ಹೆಸರನ್ನೂ ನಾನೇ ಆಯ್ಕೆ ಮಾಡಿರುವ ಹೆಮ್ಮೆ ನನಗಿದೆ.
-ಇಂದ್ರಾಣಿ ರಾಜಶೇಖರ
ಏಜೀಸ್ ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.